ರಾಮನಗರ: ಸಿಲಿಕಾನ್ ಸಿಟಿ ಕೂಗಳತೆ ದೂರದಲ್ಲಿನ ರಾಮನಗರ ಅಂದರೆ ಟೆಕ್ಕಿಗಳಿಗೆ ತುಂಬಾನೆ ಇಷ್ಟ. ವೀಕೆಂಡ್ ಬಂತು ಅಂದರೆ ಸಾಕು ಟ್ರಕ್ಕಿಂಗ್, ವೀಕೆಂಡ್ ಟ್ರಿಪ್ ಅಂತ ಹೋಗುತ್ತಿರುತ್ತಾರೆ. ಆದರೆ ಡೇ ಆ್ಯಂಡ್ ನೈಟ್ ಹಲವೆಡೆ ಅನಧಿಕೃತವಾಗಿ ಟ್ರಕ್ಕಿಂಗ್ ಮಾಡುತ್ತಿದ್ದಾರೆ.
ಹೌದು. ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಹಲವಾರು ಪ್ರವಾಸಿ ತಾಣಗಳಿವೆ. ಪ್ರವಾಸಿ ತಾಣಗಳ ಜೊತೆಗೆ ಬೆಟ್ಟಗುಡ್ಡಗಳು ಸಹ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಾ ಇದೆ. ಆದರೆ ಇದೀಗ ಈ ಬೆಟ್ಟಗುಡ್ಡಗಳಿಗೆ ಅನುಮತಿಯಿಲ್ಲದೇ ಡೇ ಆ್ಯಂಡ್ ನೈಟ್ ಟ್ರಕ್ಕಿಂಗ್ ಕೂಡಾ ನಡೆಯುತ್ತಿರುವ ಘಟನೆ ಸಾಮಾನ್ಯವಾಗಿ ಹೋಗಿದೆ. ಮಾಗಡಿ ತಾಲೂಕಿನ ಸಾವನದುರ್ಗದಲ್ಲಿ ಟ್ರಕ್ಕಿಂಗ್ ನಿಷೇಧಿಸಿದ್ದರೂ ಕೂಡಾ ಟ್ರಕ್ಕಿಂಗ್‍ನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ.
ಅಡ್ವೆಂಚರ್ ನೇಷನ್ ಎಂಬ ವೆಬ್‍ಸೈಟ್ ನಲ್ಲಿ ಚಾರಣಿಗರು ಅದರಲ್ಲೂ ಟೆಕ್ಕಿಗಳೇ ಹೆಚ್ಚಿನದಾಗಿ ಬುಕ್ಕಿಂಗ್ ಮಾಡಲಾಗುತ್ತಿದೆ. ಅಲ್ಲದೇ ರಾತ್ರಿಯಿಡೀ ಟ್ರಕ್ಕಿಂಗ್, ಬೋನ್‍ಫೈರ್ ಕ್ಯಾಂಪ್ ಜೊತೆಗೆ ಬೆಳಗ್ಗಿನ ವೇಳೆ ರಾಕ್ ಕ್ಲೈಂಬಿಂಗ್ ನಡೆಸುತ್ತಾ ಅರಣ್ಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇನ್ನೂ ಜಲಾಶಯದ ಹಿನ್ನೀರಿನಲ್ಲಿ ಬೋಟಿಂಗ್, ಸ್ವಿಮ್ಮಿಂಗ್ ಸಹ ನಡೆಸುತ್ತಾ ಇದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪರಿಸರ ಪ್ರಿಯ ಕೊತ್ತಿಪುರ ಶಿವಣ್ಣ ಹೇಳಿದ್ದಾರೆ.
ಅಂದಹಾಗೆ ಸಾವನದುರ್ಗ ಮತ್ತು ಮಂಚನಬೆಲೆ ಹಿನ್ನೀರಿನ ಬಳಿ ಪ್ರವೀಣ್ ಕೃಷ್ಣ ಎಂಬವರು 2.5 ಎಕರೆ ವಿಸ್ತೀರ್ಣದಲ್ಲಿ ಅಡ್ವೆಂಚರ್ ನೇಷನ್ ರೆಸಾರ್ಟ್ ನ್ನು ನಿರ್ಮಿಸಿದ್ದಾರೆ. ಈ ರೆಸಾರ್ಟ್ ಗೆ ಆನ್‍ಲೈನ್‍ನಲ್ಲಿ ಟ್ರಕ್ಕಿಂಗ್‍ಗೆ ಬುಕ್ ಮಾಡಿದ ಚಾರಣಿಗರನ್ನ ಸಾವನದುರ್ಗದ ದಬ್ಬಗುಳಿ ತನಕ ಕರೆತರಲಾಗುತ್ತದೆ. ಬಳಿಕ ಈ ರೆಸಾರ್ಟ್ ನಲ್ಲಿ ತಂಗಲು ವ್ಯವಸ್ಥೆ ಮಾಡಿ ರಾತ್ರಿ ವೇಳೆ ಫೈರ್ ಕ್ಯಾಂಪ್ ಅಲ್ಲದೇ ರಾಕ್ ಕ್ಲೈಂಬಿಂಗ್ ಗೆ ಚಾರಣಿಗರು ಹೋಗುತ್ತಿದ್ದಾರೆ. ಆನ್‍ಲೈನ್ ನಲ್ಲಿ ಟ್ರಕ್ಕಿಂಗ್ ಬುಕ್ಕಿಂಗ್ ಆಗುತ್ತಿದ್ದಂತೆ ಮಾಹಿತಿಗಾಗಿ ಅಡ್ವೆಂಚರ್ ಪ್ರತಿನಿಧಿ ಕರೆ ಮಾಡಿ ಮಾಹಿತಿಯನ್ನ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಸಾವನದುರ್ಗ ಟ್ರಕ್ಕಿಂಗ್‍ಗೆ ದಿನವೊಂದಕ್ಕೆ 1250 ರೂಪಾಯಿಯನ್ನು ಓರ್ವ ಚಾರಣಿಗನಿಗೆ ನಿಗದಿ ಮಾಡಲಾಗಿದೆ. 3 ದಿನ 5 ದಿನದ ಟ್ರಕ್ಕಿಂಗ್ ಕೂಡಾ ನಡೆಸಲಾಗುತ್ತಿದೆ. ಇದಲ್ಲದೇ ಹಂದಿಗುಂದಿ ಅರಣ್ಯಪ್ರದೇಶ ಹಾಗೂ ಶೋಲೆ ಖ್ಯಾತಿಯ ರಾಮದೇವರ ಬೆಟ್ಟದಲ್ಲೂ ಸಹ ರಾಕ್ ಕ್ಲೈಂಬಿಂಗ್, ಟ್ರಕ್ಕಿಂಗ್ ನಡೆಸಲಾಗುತ್ತಿದೆ. ಆದರೂ ಕೂಡಾ ಅರಣ್ಯ ಇಲಾಖೆಗೆ ಸರಿಯಾದ ಮಾಹಿತಿ ಇಲ್ಲವಾಗಿದೆ ಎಂದು ಅಡ್ವೆಂಚರ್ ನೇಷನ್ ರೆಸಾರ್ಟ್ ಮ್ಯಾನೇಜರ್ ಮಹಾದೇವ್ ತಿಳಿಸಿದ್ದಾರೆ.
ಒಂದೆಡೆ ರಾಜಾರೋಷವಾಗಿ ಅರಣ್ಯದಲ್ಲಿ ರೆಸಾರ್ಟ್ ನಡೆಯುತ್ತಾ ಇದೆ. ಇನ್ನೊಂದೆಡೆ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳಲ್ಲಿ ಡೇ ಆ್ಯಂಡ್ ನೈಟ್ ಟ್ರಕ್ಕಿಂಗ್ ಕೂಡಾ ನಡೆಸಲಾಗುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತು ಟ್ರಕ್ಕಿಂಗ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv