ಮುಂಬೈ: ಭೂಗತ ಪಾತಕಿ ಹಾಗೂ ಮುಂಬೈ ಸ್ಫೋಟದ ರುವಾರಿ ದಾವೂದ್ ಇಬ್ರಾಹಿಂ ಒಡೆತನದಲ್ಲಿದ್ದ ಮುಂಬೈನ ಹೋಟೆಲ್‍ವೊಂದು ಕೆಲವೇ ದಿನಗಳಲ್ಲಿ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಯಾಗಲಿದೆ.
ಈ ಹಿಂದೆ ಹಿಂದೂ ಮಹಾ ಸಭಾ ದಾವೂದ್ ಇಬ್ರಾಹಿಂ ಬಳಸುತ್ತಿದ್ದ ಕಾರನ್ನು ಹರಾಜಿನಲ್ಲಿ ಖರೀದಿಸಿ ನಂತರ ಅದನ್ನು ಸುಟ್ಟು ಹಾಕಿತ್ತು. ಈ ಬಾರಿ ನಡೆಯುವ ಹರಾಜಿನಲ್ಲಿ ದಾವೂದ್ ಒಡೆತನದಲ್ಲಿದ್ದ ಹೋಟೆಲ್ ನ್ನು ಖರೀದಿಸಿಲು ಹಿಂದೂ ಮಹಾಸಭಾ ನಿರ್ಧರಿಸಿದೆ. ನಂತರ ಈ ಕಟ್ಟಡವನ್ನು ಸಾರ್ವಜನಿಕ ಶೌಚಾಲಯವಾಗಿ ಪರಿವರ್ತಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಭಾರತದಲ್ಲಿ ದಾವೂದ್ ಇಬ್ರಾಹಿಂ ನೆಲೆಸಿದ್ದ ಸಂದರ್ಭದಲ್ಲಿ ಬಳಕೆ ಮಾಡಲಾಗಿದ್ದ ಹಲವು ಬೆಲೆಬಾಳುವ ಸ್ವತ್ತುಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದಿತ್ತು. ಈ ಸ್ವತ್ತುಗಳನ್ನು ನವೆಂಬರ್ 14 ರಂದು ಹರಾಜು ನಡೆಸಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಮುಂಬೈನ ಪ್ರಮುಖ ಸ್ಥಳ `ದಿಲ್ಲಿ ಝೈಕಾ’ ಎಂದು ಪ್ರಸಿದ್ಧಿ ಪಡೆದಿರುವ `ಹೋಟೆಲ್ ರೌನಕ್ ಅಫ್ರೋಜ್’ ಕಟ್ಟಡವನ್ನು ಹರಾಜು ಮಾಡಲಾಗುತ್ತಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿಯವರು, ದಾವೂದ್ ಒಡೆತನದಲ್ಲಿದ್ದ ಕಟ್ಟಡವನ್ನು ಸಾರ್ವಜನಿಕ ಶೌಚಾಲವಾಗಿ ಪರಿವರ್ತನೆ ಮಾಡಿ ಸಾರ್ವಜನಿಕರಿಗೆ ಇದನ್ನು ಬಳಸಲು ಉಚಿತವಾಗಿ ನೀಡಲಾಗುತ್ತದೆ. ಈ ಮೂಲಕ ಭಾರತದಲ್ಲಿ ಭಯೋತ್ಪಾದನೆ ನಡೆಸಿದರೆ ಯಾವ ಸ್ಥಿತಿ ಬರುತ್ತದೆ ಎಂಬ ಸಂದೇಶವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
Advertisement
ಅಲ್ಲದೇ ಕಟ್ಟಡವನ್ನು ಸಾರ್ವಜನಿಕ ಶೌಚಾಲಯವಾಗಿ ಪರವರ್ತನೆ ಮಾಡಿದ ಬಳಿಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರಿಂದ ಇದನ್ನು ಉದ್ಘಾಟನೆ ಮಾಡಿಸಲಾಗುತ್ತದೆ ಎಂದು ಹೇಳಿದರು.