ದುಬೈ: ಟಿ20 ವಿಶ್ವಕಪ್ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಸೆಣಸಾಡಿದವು. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸಿಡಿಸಿದ ಒಂದು ಸಿಕ್ಸರ್ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
Advertisement
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 176 ರನ್‍ಗಳ ದೊಡ್ಡ ಮೊತ್ತ ಕಲೆಹಾಕಿತು. 177 ರನ್‍ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಭರ್ಜರಿ ಓಪನಿಂಗ್ ನೀಡಿದ್ದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ಕಡೆ ತಾಳ್ಮೆಯುತ ಬ್ಯಾಟಿಂಗ್ ಮಾಡುತ್ತಿದ್ದ ವಾರ್ನರ್ ತಾಳ್ಮೆ ಕಳೆದುಕೊಂಡರು. 8ನೇ ಓವರ್ ಎಸೆಯಲು ಬಂದ ಮೊಹಮ್ಮದ್ ಹಫೀಜ್ ಎಸೆದ ಚೆಂಡು ಪಿಚ್‍ನಲ್ಲಿ ಎರಡು ಬಾರಿ ಪುಟಿದೆದ್ದು, ಪಿಚ್‍ನಿಂದ ಹೊರಕ್ಕೆ ಹೋಯಿತು. ಹೀಗೆ ನಿಯಂತ್ರಣವನ್ನು ಕಳೆದುಕೊಂಡು ಮೊಹಮ್ಮದ್ ಹಫೀಜ್ ಎಸೆದ ಎಸತಕ್ಕೆ ಸ್ಟ್ರೈಕ್‍ನಲ್ಲಿದ್ದ ವಾರ್ನರ್ ಪಿಚ್‍ನಿಂದ ಹೊರಹೋಗುತ್ತಿದ್ದ ಚೆಂಡಿನ ಸಮೀಪ ಬಂದು ಸಿಕ್ಸ್ ಬಾರಿಸಿದರು. ಈ ಸಿಕ್ಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಬಳಿಕ ಮುಚ್ಚಿತು ಐವರ ಟಿ20 ವೃತ್ತಿಜೀವನ
Advertisement
View this post on Instagram
Advertisement
ಹಫೀಜ್ ನಿಯಂತ್ರಣ ಕಳೆದುಕೊಂಡ ಎಸೆತವನ್ನು ಗಮನಿಸಿ ಕ್ರೀಡಾಸ್ಫೂರ್ತಿ ಮೆರೆದಿದ್ದರೆ ಅದನ್ನು ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಬಹುದಿತ್ತು. ಆದರೆ ವಾರ್ನರ್ ಸಿಕ್ಸರ್ ಗಟ್ಟಿದ ಪರಿಣಾಮ ಅಂಪೈರ್ ನೋ ಬಾಲ್ ಎಂದು ಘೋಷಿಸಿದರು. ಕಡೆಗೆ ವಾರ್ನರ್ 49 ರನ್ (30 ಎಸೆತ 3 ಬೌಂಡರಿ, ಸಿಕ್ಸ್) ಸಿಡಿಸಿ ವಿವಾದಿತವಾಗಿ ಔಟ್ ಆದರು. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು
Advertisement
Absolutely it was a wonderful hit by @davidwarner31 ????????. Great shot
— Ashwin ???????? (@ashwinravi99) November 12, 2021
ವಾರ್ನರ್ ಈ ಸಿಕ್ಸ್ ಬಗ್ಗೆ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಕಿಡಿಕಾರಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ವಾರ್ನರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಗಂಭೀರ್ ರಂತೆ ಹಲವು ಮಾಜಿ ಆಟಗಾರರು ಸಹಿತ ಕ್ರಿಕೆಟ್ ಪ್ರೇಮಿಗಳು ವಾರ್ನರ್ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಪಂದ್ಯ ಗೆದ್ದರೂ ಸಂಭ್ರಮಿಸದ ನೀಶಮ್ ಫೋಟೋ ವೈರಲ್