ದುಬೈ: ತನ್ನ ಹೊಡಿಬಡಿ ಬ್ಯಾಟಿಂಗ್ ಶೈಲಿಯ ಮೂಲಕ ಎಲ್ಲರ ಗಮನಸೆಳೆದಿದ್ದ ಆಸೀಸ್ ಓಪನರ್ ಡೇವಿಡ್ ವಾರ್ನರ್ ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದರು, ಆದರೆ ಎಸ್‌ಆರ್‌ಎಚ್ ತಂಡ ಈ ಬಾರಿಯ ಐಪಿಎಲ್‍ನಲ್ಲಿ ಕೇವಲ ಒಂದು ಪಂದ್ಯವನ್ನು ಆಡಿಸಿ ವಾರ್ನರ್‌ನ್ನು ತಂಡದಿಂದ ಹೊರಗಿಟ್ಟಿದೆ.
Advertisement
ವಿಶ್ವ ಕ್ರಿಕೆಟ್ ಕಂಡ ಉತ್ತಮ ಬ್ಯಾಟ್ಸ್‌ಮ್ಯಾನ್‌ಗಳಲ್ಲಿ ಡೇವಿಡ್ ವಾರ್ನರ್ ಕೂಡ ಒಬ್ಬರು ಬ್ಯಾಟಿಂಗ್ ಬಂದು ಬೌಂಡರಿ ಸಿಕ್ಸರ್ ಗಳನ್ನು ಮನಬಂದಂತೆ ಚಚ್ಚುವ ಅವರ ಆಟವನ್ನು ಕಂಡು ಕ್ರಿಕೆಟ್ ಪ್ರೇಮಿಗಳು ಮೆಚ್ಚಿಕೊಂಡಿದ್ದರು. ಆದರೆ ವಾರ್ನರ್ ಈ ಬಾರಿ ಐಪಿಎಲ್‍ನಲ್ಲಿ ಮಂಕಾಗಿದ್ದಾರೆ. ಇದನ್ನೂ ಓದಿ: ಧೋನಿಯ ಹಸ್ತಾಕ್ಷರದ ಬ್ಯಾಟ್, ಜೆರ್ಸಿ ಪಡೆದ ಯಶಸ್ವಿ ಜೈಸ್ವಾಲ್
Advertisement
Advertisement
14ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಸತತ ಸೋಲಿನಿಂದ ಕಂಗೆಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕತ್ವದ ಬದಲಾವಣೆ ಮಾಡಲಾಗಿತ್ತು. ನಾಯಕನ ಪಟ್ಟದಿಂದ ಡೇವಿಡ್ ವಾರ್ನರ್ ಅವರನ್ನು ಕೆಳಗಿಳಿಸಿ ಕೇನ್ ವಿಲಿಯಮ್ಸನ್ ಅವರಿಗೆ ಹೈದರಾಬಾದ್ ತಂಡದ ನಾಯಕನ ಪಟ್ಟ ಕಟ್ಟಲಾಗಿತ್ತು.
Advertisement
ಹೈದರಾಬಾದ್ ತಂಡ ವಾರ್ನರ್ ನಾಯಕತ್ವದಲ್ಲಿ 2016ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು. ಹೈದರಾಬಾದ್ ಪರ ವಾರ್ನರ್ 1015 ರಿಂದ 2019ರ ಮಧ್ಯೆ ಮೂರು ಬಾರಿ ಅತೀ ಹೆಚ್ಚು ರನ್ ಸಿಡಿಸಿ ಆರೆಂಜ್ ಕ್ಯಾಪ್‍ನ ಒಡೆಯನಾಗಿದ್ದರು. ಹಾಗೆ ಕಳೆದ 6 ಸೀಸನ್‍ಗಳಲ್ಲಿ ಹೈದರಾಬಾದ್ ತಂಡದ ಪರ 500ಕ್ಕೂ ಹೆಚ್ಚು ರನ್ ಸಿಡಿಸಿದ ಆಟಗಾರನಾಗಿ ವಾರ್ನರ್ ಮಿಂಚಿದ್ದರು. ಇದನ್ನೂ ಓದಿ: ಪಂಜಾಬ್ ವಿರುದ್ಧ ಆರ್ಸಿಬಿಗೆ 6 ರನ್ ಜಯ – ಫ್ಲೇ ಆಫ್‍ಗೆ ಎಂಟ್ರಿ
ವಾರ್ನರ್ ಹೈದರಾಬಾದ್ ತಂಡವನ್ನು 2015, 2016, 2017 ಮತ್ತು 2020ರ ಸೀಸನ್‍ಗಳಲ್ಲಿ ಪ್ಲೇ ಆಫ್ ಹಂತಕ್ಕೆ ಏರಿಸಿದ್ದರು. ಅಷ್ಟೇ ಅಲ್ಲದೆ ಐಪಿಎಲ್‍ನಲ್ಲಿ ವಾರ್ನರ್ 150 ಪಂದ್ಯಗಳನ್ನು ಆಡಿ 139.96 ಸ್ಟ್ರೈಕ್ ರೇಟ್‍ನಲ್ಲಿ 5,449 ರನ್ ಗಳಿಸಿದ್ದಾರೆ. ಇದು ಮಾತ್ರವಲ್ಲದೆ ಐಪಿಎಲ್ ಇತಿಹಾಸದಲ್ಲೇ 50 ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಮಿಂಚುತ್ತಿರುವ ಅನ್ ಕ್ಯಾಪ್ಡ್ ಪ್ಲೇಯರ್ಸ್
2021ರ ಐಪಿಎಲ್‍ನಲ್ಲಿ ಹೈದರಾಬಾದ್ ಪರ 8 ಪಂದ್ಯಗಳನ್ನು ಆಡಿರುವ ವಾರ್ನರ್ 2 ಅರ್ಧಶತಕ ಸಹಿತ 195ರನ್ ಗಳಿಸಿದ್ದಾರೆ. ಈ ನಡುವೆ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಕೇವಲ ಒಂದು ಪಂದ್ಯವಾಡಿಸಿ ತಂಡದಿಂದ ದೂರ ಇರಿಸಿ ಪಂದ್ಯದ ವೇಳೆ ಹೋಟೆಲ್‍ನಲ್ಲೇ ಇರುವಂತೆ ಫ್ರಾಂಚೈಸಿ ಮಾಡಿರುವುದು ವಿಪರ್ಯಾಸ.