ದುಬೈ: ಐಪಿಎಲ್‍ನಲ್ಲಿ ಕಳಪೆ ಫಾರ್ಮ್‌ನಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾದ ಆರಂಭಿಕ ಅಟಗಾರ ಡೇವಿಡ್ ವಾರ್ನರ್ ಟಿ20 ವಿಶ್ವಕಪ್‍ನಲ್ಲಿ ಹೀರೋ ಆಗಿ ಮಿಂಚಿ ದಾಖಲೆಯ ಒಡೆಯನಾಗಿದ್ದಾರೆ.
ತನ್ನ ಹೊಡಿಬಡಿ ಬ್ಯಾಟಿಂಗ್ ಶೈಲಿಯ ಮೂಲಕ ಎಲ್ಲರ ಗಮನಸೆಳೆದಿದ್ದ ಆಸೀಸ್ ಓಪನರ್ ಡೇವಿಡ್ ವಾರ್ನರ್ ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದರು, ಆದರೆ SRH ತಂಡ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಕೇವಲ ಒಂದು ಪಂದ್ಯವನ್ನು ಆಡಿಸಿ ವಾರ್ನರ್‌ನ್ನು ತಂಡದಿಂದ ಹೊರಗಿಟ್ಟಿತು. ಇದನ್ನೂ ಓದಿ: ಹೈದಾರಾಬಾದ್‍ಗೆ ಬೇಡವಾದ ಡೇವಿಡ್ ವಾರ್ನರ್
ಆ ಬಳಿಕ ಇದೀಗ ಮುಕ್ತಾಯಗೊಂಡ ಟಿ20 ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗೆಲ್ಲಲು ಬ್ಯಾಟಿಂಗ್‍ನಲ್ಲಿ ನೆರವಾದ ವಾರ್ನರ್ 7 ಪಂದ್ಯಗಳಿಂದ 289 ರನ್ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆಮಿಫೈನಲ್ ಮತ್ತು ಫೈನಲ್‍ನಲ್ಲಿ ತಂಡಕ್ಕೆ ಆಸರೆಯಾದ ವಾರ್ನರ್ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು
289 runs. 89* high score. 32 fours. 10 sixes
Congratulations on a fantastic tournament, David Warner ????#T20WorldCup pic.twitter.com/m5XfzCRAA6
— ICC (@ICC) November 15, 2021
ಆಸ್ಟ್ರೇಲಿಯಾಗೆ ಟಿ20 ವಿಶ್ವಕಪ್ ಗೆಲ್ಲಿಸಿಕೊಡಲು ಹೋರಾಡಿದ ವಾರ್ನರ್ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ನೂತನ ದಾಖಲೆಯನ್ನು ಬರೆದಿದ್ದಾರೆ. ಆಸ್ಟ್ರೇಲಿಯಾ ಪರ ಟಿ20 ವಿಶ್ವಕಪ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು 2007ರ ಟಿ20 ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ತಂಡದ ಮ್ಯಾಥ್ಯೂ ಹೇಡನ್ 265 ರನ್ ಹೊಡೆದಿದ್ದರು. ಈ ದಾಖಲೆಯನ್ನು ವಾರ್ನರ್ ಮುರಿದು ತಮ್ಮ ಹೆಸರಿಗೆ ನೂತನ ದಾಖಲೆಯನ್ನು ಬರೆಸಿಕೊಂಡಿದ್ದಾರೆ. ಇದನ್ನೂ ಓದಿ: ದ್ರಾವಿಡ್ ಬಳಿಕ ಲಕ್ಷ್ಮಣ್ NCA ಮುಖ್ಯಸ್ಥ?