ದಾವಣಗೆರೆ: ಕಚ್ಚಾ ವಸ್ತುಗಳಿಂದ ಕಾರಂಜಿ, ಪೇಪರ್ ನಿಂದ ಟೋಪಿ, ಕಲರ್ ಕಲರ್ ಕನ್ನಡಕ, ವಿವಿಧ ತರಹದ ಹೂವುಗಳು, ಗಣಿತ ಕಲಾಕೃತಿಗಳು. ಹೀಗೆ ಹತ್ತಾರು ಕಲಾಕೃತಿಗಳನ್ನು ಮಕ್ಕಳ ಹಬ್ಬದಲ್ಲಿ ದಾವಣಗೆರೆ ಸರ್ಕಾರಿ ಶಾಲೆಯ ಮಕ್ಕಳು ತಯಾರಿಸಿದ್ದಾರೆ.
ದಾವಣಗೆರೆ ನಗರದ ಸಮೀಪದ ಹಳೇ ಕುಂದುವಾಡ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಮಕ್ಕಳ ವಿಜ್ಞಾನ ಹಬ್ಬವನ್ನು ಆಯೋಜಿಸಲಾಗಿತ್ತು.
Advertisement
ಮುಖ್ಯವಾಗಿ ಶಾಲೆಯ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಸಾಂಪ್ರದಾಯಿಕ ಶೈಲಿಯ ಪಂಚೆ, ಅಂಗಿ, ಟವಲ್, ಟೋಪಿ ಧರಿಸಿ ಗಮನ ಸೆಳೆದರು. ಜೊತೆಗೆ ವಿದ್ಯಾರ್ಥಿಗಳು ಗಾಂಧೀಜಿ, ಅಂಬೇಡ್ಕರ್, ರೈತ, ಒನಕೆ ಒಬವ್ವ, ಭುವನೇಶ್ವರಿ ವೇಷಭೂಷಣ ಧರಿಸಿ ಗ್ರಾಮದ ತುಂಬಾ ಡ್ರಮ್ ಸೆಟ್ ಭಾರಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
Advertisement
Advertisement
ಎರಡು ದಿನ ನಡೆಯುವ ಈ ಹಬ್ಬದಲ್ಲಿ ಮಕ್ಕಳು ವಿವಿಧ ರೀತಿಯಲ್ಲಿ ಕಲಾಕೃತಿಗಳು, ವಿಜ್ಞಾನ ವಸ್ತುಗಳನ್ನು ತಯಾರಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಿಇಓ ಸಿದ್ದಪ್ಪ, ವೈಜ್ಞಾನಿಕವಾಗಿ ಕಲಿಯಲು ಈ ಕಲಿಕಾ ಹಬ್ಬ ಸಹಕಾರಿಯಾಗಲಿದೆ. ವಿಜ್ಞಾನ, ಗಣಿತ ಕಷ್ಟ ಎನ್ನುತ್ತಾರೆ. ಈ ಕಲಿಕಾ ಹಬ್ಬದಿಂದ ಈ ವಿಷಯಗಳು ಸುಲಭ ಎನ್ನುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ.
Advertisement
ಒಟ್ಟಾರೆ ಎರಡು ದಿನಗಳ ಈ ಕಲಿಕಾ ಹಬ್ಬದಲ್ಲಿ ಮಕ್ಕಳು, ವೈಜ್ಞಾನಿಕ ಕಿಟ್ ಬಳಸಿ ವಿವಿಧ ವಸ್ತುಗಳನ್ನು ತಯಾರಿಸಲಿದ್ದು, ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.