ದಾವಣಗೆರೆ: ಹೊಸ ಮೋಟಾರು ವಾಹನ ನಿಯಮವನ್ನು ಕರ್ನಾಟಕದಲ್ಲಿ ಸಡಿಲಿಸಲಾಗಿದೆ. ಆದರೂ ಸವಾರರು ನಿಯಮಗಳ ಉಲ್ಲಂಘನೆ ಮಾಡಿ ದಂಡ ಪಾವತಿಸುತ್ತಿದ್ದಾರೆ. ಈ ನಡುವೆ ಕೆಲ ಟ್ರಾಫಿಕ್ ಪೊಲೀಸರು ಹಳೇಯ ದಂಡದ ಮೊತ್ತ ತಿಳಿಸಿ 500 ರಿಂದ 600 ರೂ. ಯನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ದಾವಣಗೆರೆಯ ಬಿ.ಪಿ. ರಸ್ತೆಯಲ್ಲಿ ದಕ್ಷಿಣ ಸಂಚಾರಿ ಠಾಣೆಯ ಮುಖ್ಯ ಪೇದೆ ರವಿ ಹಣ ಜೇಬಿಗಳಿಸಿಕೊಳ್ಳುವ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಫೋನ್‍ಪೇಯಿಂದ ಹಣ ಕೀಳ್ತಾರೆ – ಪಬ್ಲಿಕ್ ಕ್ಯಾಮೆರಾ ಕಂಡ ಕೂಡ್ಲೇ ಓಡ್ತಾರೆ ಟ್ರಾಫಿಕ್ ಪೊಲೀಸ್ರು
Advertisement
ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕಬೇಕು. ಬಿ.ಪಿ.ರಸ್ತೆಯಲ್ಲಿ ಕರ್ತವ್ಯದ ಮೇಲಿದ್ದ ಪೇದೆ ರವಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರನನ್ನ ತಡೆದು ಹಣ ಕೇಳಿರುವ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿದೆ. ಸವಾರರು ಸರ್ ನಮ್ಮ ಬಳಿ ಹಣ ಇಲ್ಲ. ಇಷ್ಟೇ ಇರೋದು ದಯವಿಟ್ಟು ತೆಗೆದುಕೊಳ್ಳಿ ಎಂದಿದ್ದಾರೆ. ಪೇದೆ ರವಿ ಮಾತ್ರ ಇಷ್ಟು ಸಾಕಾಗಲ್ಲ, ಪರ್ಸ್ ಚೆಕ್ ಮಾಡು, ತೋರಿಸು ಹಣ ಇದೆ ಅಲ್ವಾ ಕೊಡು ಎಂದು ಪೀಡಿಸುವ ಮೂಲಕ ಸಾರ್ವಜನಿಕವಾಗಿ ಹಣ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ವಿಡಿಯೋ: ರಸೀದಿ ನೀಡದೇ ದಂಡ ವಸೂಲಿ ಮಾಡ್ತಿರೋ ಚಿಕ್ಕೋಡಿ ಟ್ರಾಫಿಕ್ ಪೊಲೀಸ್
Advertisement
Advertisement
ಮುಖ್ಯ ಪೇದೆ ರವಿ ಪ್ರತಿನಿತ್ಯ ಇದೇ ರೀತಿ ಸವಾರರಿಂದ ಹಣ ವಸೂಲಿ ಮಾಡುತ್ತಾರೆ. ಹಣ ಪಡೆದಿದ್ದಕ್ಕೆ ಯಾವುದೇ ರಶೀದಿ ಸಹ ನೀಡಲ್ಲ. ದಂಡಕ್ಕೆ ರಶೀದಿ ಕೇಳಿದ್ರೆ ಸಬೂಬು ಹೇಳಿ ಸವಾರರು ಕಳುಹಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲವು ದಿನಗಳ ಹಿಂದೆ ಇದೇ ರೀತಿ ಟ್ರಾಫಿಕ್ ಪೊಲೀಸ್ ಹಣ ಪಡೆಯುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ಟ್ರಾಫಿಕ್ ಪೊಲೀಸ್ ಲಂಚ ಸ್ವೀಕರಿಸಿದ ವೀಡಿಯೋ ವೈರಲ್, ಕೆಲಸದಿಂದ ವಜಾ