ದಾವಣಗೆರೆ: ಕಳೆದ ಮೂವತ್ತು ದಿನಗಳಿಂದ ಒಂದೇ ಒಂದು ಪಾಸಿಟಿವ್ ಪ್ರಕರಣಗಳು ಇಲ್ಲದ ದಾವಣಗೆರೆಯನ್ನು ಹಸಿರು ವಲಯಕ್ಕೆ ಸೇರಿಸಲಾಗಿತ್ತು. ಆದರೆ ಈಗ ಹಸಿರು ಝೋನ್ ನಲ್ಲಿದ್ದ ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದಾವಣಗೆರೆ ಡೇಂಜರ್ ಝೋನ್‍ಗೆ ಒಳಪಟ್ಟಿದೆ. ಕಳೆದ 30 ದಿನಗಳಿಂದಲೂ ಯಾವುದೇ ಸೋಂಕಿತರು ಪತ್ತೆಯಾಗದ ಕಾರಣ ದಾವಣಗೆರೆ ಹಸಿರುವಲಯಕ್ಕೆ ಸೇರ್ಪಟ್ಟಿತ್ತು. ಆದರೆ ನಿನ್ನೆ ಹಾಗೂ ಇಂದು 2 ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಳದಿ ವಲಯಕ್ಕೆ ಸೇರ್ಪಡೆಯಾಗಿದೆ.
Advertisement
ನಿನ್ನೆ ನಗರದ ಭಾಷಾನಗರದಲ್ಲಿ ಓರ್ವ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿತ್ತು. ಭಾಷಾನಗರ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಅಲ್ಲದೇ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಜನರನ್ನು ಪ್ರತೇಯಕ ಹೋಟೆಲ್ ಒಂದರಲ್ಲಿ ಐಸೋಲೇಷನ್‍ನಲ್ಲಿ ಮಾಡಲಾಗಿದೆ. 2ನೇ ಹಂತದ ಸಂಪರ್ಕದಲ್ಲಿದ್ದ 45 ಜನರನ್ನು ಪತ್ತೆ ಮಾಡಲಾಗಿದ್ದು, ಈಗಾಗಲೇ ಒಟ್ಟು 56 ಜನರ ಗಂಟಲು ದ್ರವ ಮಾದರಿಯನ್ನು ಇಂದು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇವರು ಕೆಲಸ ಮಾಡುತ್ತಿದ್ದ ನಗರ ಆರೋಗ್ಯ ಕೇಂದ್ರವನ್ನು ಬಂದ್ ಮಾಡಲಾಗಿದೆ.
Advertisement
ಇಂದು ಬೆಳಗ್ಗೆ ದಾವಣಗೆರೆಯ ಜಾಲಿನಗರದ ನಿವಾಸಿಯೊಬ್ಬರಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 68 ವರ್ಷದ ವ್ಯಕ್ತಿ ಅನಾರೋಗ್ಯದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಏಪ್ರೀಲ್ 27 ರಂದು ದಾಖಲಾಗಿದ್ದರು. ಕೋವಿಡ್ ವಾರ್ಡ್‍ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ ಗೆ ರವಾನೆ ಮಾಡಲಾಗಿತ್ತು. ಇಂದು ವರದಿ ಲಭ್ಯವಾಗಿದ್ದು ವೃದ್ಧನಿಗೆ ಸೋಂಕು ಇರುವುದು ಖಚಿತವಾಗಿದೆ. ವೃದ್ಧನ ಟ್ರಾವಲ್ ಹಿಸ್ಟರಿಗಾಗಿ ಜಿಲ್ಲಾಡಳಿತ ಶೋಧ ನಡೆಸಿದೆ. ವೃದ್ಧನ ಸಂಪರ್ಕದಲ್ಲಿದ್ದ ಕುಟುಂಬದ ಒಂದೂವರೆ ವರ್ಷದ ಒಂದು ಮಗು ಹಾಗೂ ಮೂರು ವರ್ಷದ ಇನ್ನೊಂದು ಮಗು ಸೇರಿ ಒಂಬತ್ತು ಜನರನ್ನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‍ಗೆ ರವಾನೆ ಮಾಡಲಾಗಿದೆ.
Advertisement
Advertisement
ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು 2 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಸೋಂಕಿತರಿಬ್ಬರ ಮಾಹಿತಿ ಪಡೆಯಲಾಗಿದ್ದು ಬಾಷಾನಗರ ಹಾಗೂ ಜಾಲಿನಗರ ಎರಡನ್ನು ಸೀಲ್ ಡೌನ್ ಮಾಡಲಾಗಿದೆ. ನಿನ್ನೆ ಸೋಂಕು ಪತ್ತೆಯಾದ ಸ್ಟಾಫ್ ನರ್ಸ್ ಪ್ರಕರಣಕ್ಕೂ ಈಗ ಪತ್ತೆಯಾದ ವೃದ್ಧನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇಬ್ಬರ ಟ್ರಾವೆಲ್ ಹಿಸ್ಟರಿ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಇಬ್ಬರ ಟ್ರಾವೆಲ್ ಹಿಸ್ಟರಿ ಕಲೆ ಹಾಕುವುದು ಸಾಕಷ್ಟು ಸವಾಲಾಗಿರುವ ಹಿನ್ನೆಲೆ ಯಾರಿಂದ ಇವರಿಗೆ ಸೋಂಕು ತಗಲಿದೆ ಎನ್ನುವುದನ್ನು ಪತ್ತೆ ಮಾಡಬೇಕಿದೆ.