ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಬೆಳ್ಳಂಬೆಳಗ್ಗೆ ನಗರ ಸ್ವಚ್ಛತೆ ಮಾಡಿದ್ದಾರೆ.
Advertisement
ಬೆಳ್ಳಂಬೆಳಗ್ಗೆ ನಗರ ಸ್ವಚ್ಚತೆಗಿಳಿದ ರೇಣುಕಾಚಾರ್ಯ ಅವರು, ನಗರದ ಕೋರ್ಟ್ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಗಿಡಗಂಟಿಗಳನ್ನು ಕತ್ತರಿಸಿ ರಸ್ತೆಯ ಅಕ್ಕಪಕ್ಕ ಸ್ವಚ್ಛಗೊಳಿಸಿದ್ದಾರೆ. ಇದನ್ನೂ ಓದಿ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ
Advertisement
Advertisement
ನಗರ ಸ್ವಚ್ಛತೆ ದೃಷ್ಟಿಯಿಂದ ಖುದ್ದು ಶಾಸಕರೇ ಸ್ವಚ್ಛತೆಗಿಳಿದಿದ್ದು ವಿಶೇಷವಾಗಿತ್ತು. ಸ್ವಚ್ಛತಾ ಕಾರ್ಯದಲ್ಲಿ ರೇಣುಕಾಚಾರ್ಯರಿಗೆ ಪುರಸಭೆ ಸದಸ್ಯರು ಸಾಥ್ ನೀಡಿದ್ದಾರೆ. ಈ ವೇಳೆ ನಗರ ಸ್ವಚ್ವವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ರೇಣುಕಾಚಾರ್ಯ ಅವರು ಸೂಚನೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ: ಉದ್ಧವ್ ಠಾಕ್ರೆ