ಬೆಳ್ಳಂಬೆಳಗ್ಗೆ ಕತ್ತಿ ಹಿಡಿದು ನಗರ ಸ್ವಚ್ಛತೆಗಿಳಿದ ರೇಣುಕಾಚಾರ್ಯ

Public TV
1 Min Read
Davanagere Cleanliness Renukacharya

ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಬೆಳ್ಳಂಬೆಳಗ್ಗೆ ನಗರ ಸ್ವಚ್ಛತೆ ಮಾಡಿದ್ದಾರೆ.

Davanagere Cleanliness Renukacharya 2

ಬೆಳ್ಳಂಬೆಳಗ್ಗೆ ನಗರ ಸ್ವಚ್ಚತೆಗಿಳಿದ ರೇಣುಕಾಚಾರ್ಯ ಅವರು, ನಗರದ ಕೋರ್ಟ್ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಗಿಡಗಂಟಿಗಳನ್ನು ಕತ್ತರಿಸಿ ರಸ್ತೆಯ ಅಕ್ಕಪಕ್ಕ ಸ್ವಚ್ಛಗೊಳಿಸಿದ್ದಾರೆ. ಇದನ್ನೂ ಓದಿ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ

Davanagere Cleanliness Renukacharya 1

ನಗರ ಸ್ವಚ್ಛತೆ ದೃಷ್ಟಿಯಿಂದ ಖುದ್ದು ಶಾಸಕರೇ ಸ್ವಚ್ಛತೆಗಿಳಿದಿದ್ದು ವಿಶೇಷವಾಗಿತ್ತು. ಸ್ವಚ್ಛತಾ ಕಾರ್ಯದಲ್ಲಿ ರೇಣುಕಾಚಾರ್ಯರಿಗೆ ಪುರಸಭೆ ಸದಸ್ಯರು ಸಾಥ್ ನೀಡಿದ್ದಾರೆ. ಈ ವೇಳೆ ನಗರ ಸ್ವಚ್ವವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ರೇಣುಕಾಚಾರ್ಯ ಅವರು ಸೂಚನೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ: ಉದ್ಧವ್ ಠಾಕ್ರೆ

Share This Article
Leave a Comment

Leave a Reply

Your email address will not be published. Required fields are marked *