ದಾವಣಗೆರೆ: ಕರ್ನಾಟಕದ ಜನ ಒಳ್ಳೆಯವರು, ದೇಶಭಕ್ತರು, ಆದ್ರೆ ನಿಮ್ಮ ನಾಯಕರು ಕೆಟ್ಟವರು. ರಾಜ್ಯವನ್ನ ಬರ್ಬಾದ್ ಮಾಡ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಬೇಸರ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ನಡೆದ ಬೃಹತ್ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಮಸ್ಕಾರ ಕರ್ನಾಟಕ, ಕರ್ನಾಟಕದ ಹೃದಯ ಭಾಗ ದಾವಣಗೆರೆಗೆ ಬಂದಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.
All the workers and office bearers of AAP Karnataka were administered oath today to raise their voice for the rights of the people with utmost sincerity. https://t.co/7bGqfmKMiy
— Arvind Kejriwal (@ArvindKejriwal) March 4, 2023
ಬಳಿಕ ಹಿಂದಿಯಲ್ಲಿ ಭಾಷಣ ಮಾಡಿ, ಕರ್ನಾಟಕದ ಜನ ದೇಶಭಕ್ತರು, ಕಷ್ಟ ಪಡುವವರು, ತುಂಬಾ ಒಳ್ಳೆಯವರು. ಆದರೆ ನಿಮ್ಮ ನಾಯಕರು ಕೆಟ್ಟವರು ಎಂದು ಹೇಳಿದರು. ಇದನ್ನೂ ಓದಿ: Manish Sisodia ಸಿಬಿಐ ಕಸ್ಟಡಿ ವಿಸ್ತರಣೆ – ಮಾ.10 ರಂದು ಜಾಮೀನು ಅರ್ಜಿ ವಿಚಾರಣೆ
ಇದು 40 ಪರ್ಸೆಂಟ್ ಸರ್ಕಾರ. ಇಂತಹ ಒಳ್ಳೆಯ ರಾಜ್ಯವನ್ನ ಬರ್ಬಾದ್ ಮಾಡ್ತಿದ್ದಾರೆ. ಅಮಿತ್ ಶಾ (Amit Shah) ಕರ್ನಾಟಕಕ್ಕೆ ಬಂದರು. ದೊಡ್ಡ-ದೊಡ್ಡ ಮಾತುಗಳನ್ನಾಡಿ ವಿಮಾನ ಹತ್ತಿ ಹೋದರು. ಅದೇ ದಿನ 8 ಕೋಟಿ ರೂಪಾಯಿಯೊಂದಿಗೆ ಬಿಜೆಪಿಯ ಒಬ್ಬ ನಾಯಕನ ಮಗ ಸಿಕ್ಕಿಬಿದ್ದ. ಆದ್ರೆ ಇದುವರೆಗೂ ಅವನನ್ನ ಅರೆಸ್ಟ್ ಮಾಡಿಲ್ಲ. ಮುಂದಿನ ವರ್ಷ ಇವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡ್ತಾರೆ ಎಂದು ಟೀಕಿಸಿದರು.
ರೇಡ್‌ನಲ್ಲಿ 8 ಕೋಟಿ ಸಿಕ್ಕರೂ, ಬಿಜೆಪಿ (BJP) ನಾಯಕಕನ್ನ ಅರೆಸ್ಟ್ ಮಾಡಿಲ್ಲ. ಆದ್ರೆ ನಮ್ಮ ಮನೀಶ್ ಸಿಸೋಡಿಯಾ (Manish Sisodia) ಅವರನ್ನ ಅರೆಸ್ಟ್ ಮಾಡಿದ್ದಾರೆ. ಆದ್ರೆ ಸಿಸೋಡಿಯಾ ಅವರ ಮನೆಯಲ್ಲಿ ಸಿಕ್ಕಿದ್ದು ಕೇವಲ 10 ಸಾವಿರ ರೂಪಾಯಿ ಎಂದು ಹೇಳಿದರು. ಇದನ್ನೂ ಓದಿ: ಭಾರತದ ಸಂಸ್ಥೆಯ ಕೆಮ್ಮಿನ ಸಿರಪ್ ಸೇವಿಸಿ ಉಜ್ಬೇಕಿಸ್ತಾನ ಮಕ್ಕಳ ಸಾವು ಕೇಸ್ – ನೋಯ್ಡಾದಲ್ಲಿ ಮೂವರು ಅರೆಸ್ಟ್
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೋದಿಯವರು (Narendra Modi) ಇಲ್ಲಿಗೆ ಬಂದಾಗ, `20 ಪರ್ಸೆಂಟ್ ಸರ್ಕಾರ ಇದೆ, ನಮಗೆ ವೋಟ್ ಹಾಕಿ.. ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀವಿ’ ಅಂದಿದ್ರು. ಆದ್ರೆ ಡಬಲ್ ಎಂಜಿನ್ ಸರ್ಕಾರ ಅಂತಾ ಹೇಳಿ.. ಹೇಳಿ.. ಭ್ರಷ್ಟಾಚಾರವನ್ನೂ ಡಬಲ್ ಮಾಡಿದ್ದಾರೆ. ಆಗ 20 ಪರ್ಸೆಂಟ್ ಇತ್ತು, ಈಗ 40 ಪರ್ಸೆಂಟ್ ಆಗಿದೆ. ಮುಂದೆ 60 ಪರ್ಸೆಂಟ್, 100 ಪರ್ಸೆಂಟ್ ಸಹ ಆಗಲಿದೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಗುತ್ತಿದಾರರ ಸಂಘದವರು ಪತ್ರ ಬರೆದರು. 2 ವರ್ಷ ಕಳೆದ್ರೂ ಮೋದಿ ಅವರಿಂದ ಯಾವುದೇ ಉತ್ತರ ಬರಲಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದ್ರೆ ಅವರನ್ನೇ ಜೈಲಿಗಟ್ಟಿದ್ದರು. ಇದು ಯಾವ ರೀತಿಯ ಸರ್ಕಾರ? ಸಂತೋಷ್ ಪಾಟೀಲ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ಕಿರಕುಳ ಕೊಟ್ಟರು. ಕೊನೆಗೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡರು. ಈಗ ಶಾಲೆ, ಮಠಗಳನ್ನೂ ಬಿಡದೇ ಲೂಟಿ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಪ್ರಾಮಾಣಿಕರು: ಅಷ್ಟೇ ಅಲ್ಲದೇ ಕಳೆದ 5 ವರ್ಷಗಳಿಂದ ಬೆಂಗಳೂರು ರಸ್ತೆಗಳನ್ನ ರಿಪೇರಿ ಮಾಡಲು 20 ಸಾವಿರ ಕೋಟಿ ಖರ್ಚು ಮಾಡಿದ್ದೀವಿ ಅಂತಾರೆ. ನೆಟ್ಟಗೆ 20 ಗುಂಡಿ ಮುಚ್ಚೋಕೆ ಆಗಿಲ್ಲ. ಹಾಗಾದ್ರೆ 20 ಸಾವಿರ ಕೋಟಿ ರೂ. ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ ಅವರು, ಒಳ್ಳೆಯ ಶಿಕ್ಷಣ, ಉದ್ಯೋಗ ನೀಡಲು ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ನಮ್ಮನ್ನು ಬೆಂಬಲಿಸಿ, ನಾವು ಪ್ರಾಮಾಣಿಕರು ಎಂದು ಜನತೆಯಲ್ಲಿ ಮನವಿ ಮಾಡಿದರು.