ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತ ʼಪುಟಿನ್ ಬ್ರೈನ್ʼ ಎಂದೇ ಹೆಸರಾಗಿದ್ದ ರಷ್ಯಾದ ಸಿದ್ಧಾಂತವಾದಿ ಅಲೆಕ್ಸಾಂಡರ್ ಡುಗಿನ್ ಅವರ ಮಗಳು ಮಾಸ್ಕೋದ ಹೊರವಲಯದಲ್ಲಿ ಕಾರ್ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಡುಗಿನ್ ಬೆಂಬಲಿಗರಾಗಿದ್ದರು. ಡುಗಿನ್ ಅವರನ್ನು ಹತ್ಯೆಗೆ ಟಾರ್ಗೆಟ್ ಮಾಡಲಾಗಿತ್ತು. ಆದರೆ ಸ್ಫೋಟಕ್ಕೆ ಕೆಲವು ಕ್ಷಣಗಳ ಮುಂಚೆ ಡುಗಿನ್ ಅವರ ಕಾರನ್ನು ಪುತ್ರಿ ಪಡೆದುಕೊಂಡಿದ್ದರು. ನಂತರ ಕಾರ್ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್
Advertisement
Advertisement
1992 ರಲ್ಲಿ ಜನಿಸಿದ ಡೇರಿಯಾ ಡುಗಿನಾ, ಮಾಸ್ಕೋದ ಹೊರವಲಯದಲ್ಲಿ ಸುಮಾರು 40 ಕಿಲೋಮೀಟರ್ ದೂರದಲ್ಲಿದ್ದ ಬೊಲ್ಶಿ ವೈಝೋಮಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ತನ್ನ ಟೊಯೊಟಾ ಲ್ಯಾಂಡ್ ಕ್ರೂಸರ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡು ಸಾವನ್ನಪ್ಪಿದ್ದಾಳೆ ಎಂದು ರಷ್ಯಾದ ತನಿಖಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
Advertisement
ಡುಗಿನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಕ್ಸಿಯೋಮಿ
Advertisement
ಡೇರಿಯಾ ಡುಗಿನಾ ತಂದೆ ಅಲೆಗ್ಸಾಂಡರ್ ಡುಗಿನ್ ಅವರು ʻಪುಟಿನ್ ಬ್ರೈನ್ʼ (ಪುಟಿನ್ ಮಿದುಳು) ಎಂದೇ ಹೆಸರಾದವರು. ರಷ್ಯಾ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಡುಗಿನ್ ನಿರಂತರವಾಗಿ ಪ್ರತಿಪಾದಿಸುತ್ತಿದ್ದವರು. ಉಕ್ರೇನ್‌ನಲ್ಲಿ ಮಾಸ್ಕೋದ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು.
ಉಕ್ರೇನಿಯನ್ ಆಡಳಿತ ಭಯೋತ್ಪಾದಕರು ಅಲೆಕ್ಸಾಂಡರ್ ಡುಗಿನ್ ಅವರ ಹತ್ಯೆಗೆ ಪ್ರಯತ್ನಿಸಿದ್ದರು. ಆದರೆ ಅವರ ಮಗಳು ಬಲಿಯಾಗಿದ್ದಾಳೆ ಎಂದು ಡಿಎನ್‌ಆರ್ ಮುಖ್ಯಸ್ಥ ಡೆನಿಸ್ ಪುಶಿಲಿನ್ ಟೆಲಿಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.