ಲಕ್ನೋ: ತಮಿಳುನಾಡಿನ ಕೂನೂರು ಬಳಿಯ ಅರಣ್ಯ ಪ್ರದೇಶದಲ್ಲಿ ಈಚೆಗೆ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅವರ ಪುತ್ರಿ ಈಗ ತಂದೆಯ ಹಾದಿಯಲ್ಲೇ ನಡೆಯುವ ಆಶಯ ವ್ಯಕ್ತಪಡಿಸಿದ್ದಾರೆ. ಚೌಹಾಣ್ ಅವರ 11 ವರ್ಷದ ಪುತ್ರಿ, ತಂದೆಯಂತೆಯೇ ಭಾರತೀಯ ವಾಯುಪಡೆ ಪೈಲಟ್ ಆಗುತ್ತೇನೆಂದು ಹೇಳಿಕೊಂಡಿದ್ದಾರೆ.
Advertisement
ಹುತಾತ್ಮರಾದ ತಂದೆಗೆ ಆರಾಧ್ಯ ತನ್ನ ಸಹೋದರ ಅವಿರಾಜ್ ಜೊತೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 7ನೇ ತರಗತಿ ಓದುತ್ತಿರುವ ಆರಾಧ್ಯಗೆ ತನ್ನ ತಂದೆಯೇ ಹೀರೋ. ಹೀಗಾಗಿ ಅವರಂತೆಯೇ ಪೈಲಟ್ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ
Advertisement
ನೀನು ಅಧ್ಯಯನದ ಕಡೆ ಹೆಚ್ಚು ಗಮನ ಕೇಂದ್ರೀಕರಿಸು, ಅಂಕಗಳಿಗಾಗಿ ಓದಬೇಡ. ನೀನು ಚೆನ್ನಾಗಿ ಅಧ್ಯಯನ ಮಾಡಿದ ಅಂಕಗಳು ತಾನಾಗಿಯೇ ಬರುತ್ತವೆ ಎಂದು ತಂದೆ ನನಗೆ ಸಲಹೆ ನೀಡುತ್ತಿದ್ದರು ಎಂದು ಆರಾಧ್ಯ ನೆನಪಿಸಿಕೊಂಡಿದ್ದಾರೆ.
Advertisement
Advertisement
ಪೃಥ್ವಿ ಸಿಂಗ್ ಚೌಹಾಣ್ ಅವರು 2000ರಲ್ಲಿ ವಾಯುಪಡೆ ಸೇವೆಗೆ ಸೇರ್ಪಡೆಯಾಗಿದ್ದರು. ನಂತರ 2006ರಲ್ಲಿ ತಮ್ಮ ಕುಟುಂಬವನ್ನು ಮಧ್ಯಪ್ರದೇಶದ ಗ್ವಾಲಿಯರ್‍ನಿಂದ ಆಗ್ರಾಕ್ಕೆ ಸ್ಥಳಾಂತರಿಸಿದ್ದರು. ಇದನ್ನೂ ಓದಿ: ಅಮೇರಿಕಾದಲ್ಲಿ ಭೀಕರ ಚಂಡಮಾರುತ – 80ಕ್ಕೂ ಅಧಿಕ ಜನ ಸಾವು
ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಪೃಥ್ವಿ ಅವರು ಸಹ ಮೃತಪಟ್ಟರು.