ನವದೆಹಲಿ: ಭಾರತದ ಅತಿ ದೊಡ್ಡ ಪ್ಯಾಕೇಜ್ಡ್ ನೀರಿನ ಕಂಪನಿ ಬಿಸ್ಲೆರಿಯನ್ನು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಪ್ರಿಸಿದ್ಧವಾಗಿರುವ ತಂಪು ಪಾನೀಯ ಥಮ್ಸ್ ಅಪ್, ಗೋಲ್ಡ್ ಸ್ಪಾ ಮತ್ತು ಲಿಮ್ಕಾ ಬ್ರ್ಯಾಂಡ್‌ಗಳ ಕಂಪನಿಯ ಅಧ್ಯಕ್ಷ ರಮೇಶ್ ಜೆ ಚೌಹಾಣ್ ಸುಮಾರು 30 ವರ್ಷಗಳ ಕಾಲ ಬಿಸ್ಲೆರಿ ಕಂಪನಿಯನ್ನು ಮುನ್ನಡೆಸಿ, ಇದೀಗ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್‌ಗೆ (ಟಿಸಿಪಿಎಲ್) ಸುಮಾರು 6,000-7,000 ಕೋಟಿ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾರೆ.
Advertisement
Advertisement
82 ವರ್ಷದ ಚೌಹಾಣ್ ಅವರ ಮಗಳು ಜಯಂತಿ ತಮ್ಮ ತಂದೆಯ ಪಾನೀಯ ಕಂಪನಿಯ ವ್ಯಾಪಾರದಲ್ಲಿ ಆಸಕ್ತಿ ಹೊಂದಿರದ ಕಾರಣ ಚೌಹಾಣ್ ಇದೀಗ ಕಂಪನಿಗೆ ಉತ್ತರಾಧಿಕಾರಿ ಇಲ್ಲದಿರುವುದಕ್ಕೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.
Advertisement
ಈ ಬಗ್ಗೆ ಮಾಹಿತಿ ನೀಡಿರುವ ಚೌಹಾಣ್, ಬಿಸ್ಲೆರಿ ಕಂಪನಿಯ ಮಾರಾಟ ನೋವಿನ ವಿಚಾರವಾಗಿದೆ. ಇದನ್ನು ಟಾಟಾ ಗ್ರೂಪ್ ಇನ್ನೂ ಉತ್ತಮವಾಗಿ ಮುನ್ನಡೆಸುತ್ತದೆ ಎಂಬ ಭರವಸೆ ನನಗಿದೆ. ಮೌಲ್ಯ ಹಾಗೂ ಸಮಗ್ರತೆಯ ವಿಚಾರಕ್ಕೆ ಟಾಟಾ ಸಂಸ್ಕೃತಿಯನ್ನು ನಾನು ಇಷ್ಟಪಡುತ್ತೇನೆ. ಬಿಸ್ಲೆರಿಯನ್ನು ಖರೀದಿಸಲು ಇತರರು ಆಸಕ್ತಿ ತೋರಿದರೂ ನಾನು ಇದನ್ನು ಟಾಟಾ ಕಂಪನಿಗೆ ನೀಡಲು ಮನಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್ ಫೋನ್
Advertisement
ಈ ಒಪ್ಪಂದದ ಬಗ್ಗೆ ಕಳೆದ 2 ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಕೆಲ ತಿಂಗಳ ಹಿಂದೆ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಹಾಗೂ ಟಾಟಾ ಗ್ರಾಹಕ ಸಿಇಒ ಸುನಿಲ್ ಡಿಸೋಜಾ ಅವರನ್ನು ಭೇಟಿ ಮಾಡಿದ್ದೇನೆ. ಈ ಒಪ್ಪಂದ ಕೇವಲ ಹಣಕ್ಕೆ ಸಂಬಂಧಿಸಿಲ್ಲ. ನಾನು ಬಿಸ್ಲೆರಿ ಕಂಪನಿಯನ್ನು ಪೋಷಿಸಿದ ರೀತಿಯೇ ಅದನ್ನು ಮುನ್ನಡೆಸಿಕೊಂಡು ಹೋಗುವ ಮನೆಯನ್ನು ಹುಡುಕಲು ಇಷ್ಟಪಡುತ್ತೇನೆ. ಇದು ನಾನು ಉತ್ಸಾಹದಿಂದ ನಿರ್ಮಿಸಿದ ಉದ್ಯಮ. ಇದನ್ನು ಮುಂದೆಯೂ ಉತ್ಸಾಹದಿಂದ ಮುನ್ನಡೆಸಿಕೊಂಡು ಹೋಗಬೇಕೆಂಬುದೇ ನನ್ನ ಆಶಯ ಎಂದು ಹೇಳಿದ್ದಾರೆ.
ಪ್ಯಾಕೇಜ್ಡ್ ವಾಟರ್ ಕಂಪನಿ ಮೂಲತಃ ಇಟಾಲಿಯನ್ ಬ್ರಾಂಡ್ ಆಗಿದ್ದು ಅದು 1965 ರಲ್ಲಿ ಮುಂಬೈ ಮೂಲಕ ಭಾರತಕ್ಕೆ ಬಂತು. ಅದನ್ನು 4 ವರ್ಷಗಳ ಬಳಿಕ 1969 ರಲ್ಲಿ ಚೌಹಾಣ್ ಕುಟುಂಬ ಸ್ವಾಧೀನಪಡಿಸಿಕೊಂಡಿತು. ಇದನ್ನೂ ಓದಿ: ಪುರುಷರು ಜೊತೆಯಲ್ಲಿರದಿದ್ದರೆ ಮಹಿಳೆಯರಿಗಿಲ್ಲ ಜಾಮಾ ಮಸೀದಿ ಪ್ರವೇಶ