ದೊಡ್ಡಬಳ್ಳಾಪುರ: ಯಾರೋ ಅಪರಿಚಿತ ಮಹಿಳೆ ತನ್ನನ್ನ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದರೋಡೆ ಮಾಡಿದಳು ಅಂತ ಕಥೆ ಕಟ್ಟಿದ್ದ ಐನಾತಿ ಸೊಸೆ ಇದೀಗ ಜೈಲು ಸೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ.
Advertisement
ಫೆಬ್ರವರಿ 19 ರಂದು ದೊಡ್ಡಬಳ್ಳಾಪುರದ ಶಾಂತಿ ನಗರದ ವಿಶ್ವನಾಥ್ ಎಂಬವರ ಮನೆಯಲ್ಲಿ ಸೊಸೆ ಕಾವ್ಯಾ ಒಂಟಿಯಾಗಿದ್ದಾಗ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳುವಾಗಿತ್ತು. ಘಟನೆ ನಡೆದ ದಿನ ಮನೆಯವರೆಲ್ಲರೂ ಸಂಬಂಧಿಕರ ಮದುವೆಗೆ ಅಂತ ತುಮಕೂರಿನ ಶಿರಾಗೆ ತೆರಳಿದ್ದರು. ಕಾವ್ಯಾ ಗಂಡ ವಿಶ್ವನಾಥ್ ತಿರುಪತಿಗೆ ತೆರಳಿದ್ರು. ಈ ಬಗ್ಗೆ ಕೇಳಿದ್ರೆ ಯಾರೋ ಅಪರಿಚಿತ ಮಹಿಳೆ ವಿವಾಹ ಅಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದು ದರೋಡೆ ಮಾಡಿದಳು ಅಂತ ಮನೆಯವರು ಹಾಗೂ ಪೊಲೀಸರ ಮುಂದೆ ಕಾವ್ಯಾ ಕಥೆ ಕಟ್ಟಿ ಹೇಳಿಕೆ ಕೊಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ದೊಡ್ಡಬಳ್ಳಾಪುರ ನಗರ ಪೊಲೀಸರಿಗೆ ಮನೆಯ ಸೊಸೆ ಕಾವ್ಯಾಳೇ ಕಳ್ಳಿ ಅಂತ ತಿಳಿದುಬಂದಿದೆ.
Advertisement
ದರ್ಗಾಜೋಗಹಳ್ಳಿಯ ನಿವಾಸಿ ಮೆಹ್‍ಬೂಬ್ ಪಾಷಾ ಎಂಬವನ ಜೊತೆ ಸೇರಿ ಸಂಚು ರೂಪಿಸಿದ್ದ ಕಾವ್ಯಾ, ಮನೆಯಲ್ಲಿದ್ದ 1 ಕೆಜಿ 800 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದು ದೋಚಿ ಮೆಹ್‍ಬೂಬ್ ಪಾಷಾ ಮನೆಯಲ್ಲಿ ಇಟ್ಟಿದ್ದಳು. ಸದ್ಯ ಅಸಲಿ ಕಳ್ಳಿ ಕಾವ್ಯಾಳೇ ಅಂತ ತಿಳಿದುಬಂದಿದ್ದು, ಬಂಧಿತರಿಂದ 1 ಕೆಜಿ 800 ಗ್ರಾಂ ಚಿನ್ನಾಭರಣ ಹಾಗೂ 45,000 ಸಾವಿರ ರೂ. ನಗದು ಹಣವನ್ನ ಪೊಲೀಸರು ಜಪ್ತಿ ಮಾಡಿ ಕಾವ್ಯಾ ಹಾಗೂ ಮೆಹ್‍ಬೂಬ್ ಪಾಷಾನನ್ನ ಜೈಲಿಗೆ ಕಳುಹಿಸಿದ್ದಾರೆ.
Advertisement