ಕೋಲ್ಕತ್ತಾ: 19 ವರ್ಷದ ಮಗಳೊಬ್ಬಳು ತಂದೆಯ ಜೀವ ಉಳಿಸಲು ತನ್ನ ಲಿವರ್ ದಾನ ಮಾಡಿ ಆದರ್ಶ ಮಗಳೆನಿಸಿಕೊಂಡಿದ್ದಾಳೆ.
ಹೌದು. ರಾಖಿ ದತ್ತ(19) ತಂದೆಗಾಗಿ ತನ್ನ ಲಿವರ್ ದಾನ ಮಾಡಿದ್ದಾಳೆ. ದೇಹದ ಮೇಲೆ ಲಿವರ್ ಶಸ್ತ್ರಚಿಕಿತ್ಸೆಯ ಕಲೆ ಹಾಗೆ ಉಳಿದುಕೊಳ್ಳುತ್ತದೆ, ತನ್ನ ಮುಂದಿನ ಜೀವನದಲ್ಲಿ ಇದರಿಂದ ತೊಂದರೆಯಾತ್ತದೆ ಎನ್ನುವುದನ್ನೂ ಲೆಕ್ಕಿಸದೇ ಈ ಯುವತಿ ತನ್ನ ತಂದೆಯ ಜೀವ ಉಳಿಸಲು ತನ್ನ 65% ಲಿವರ್‍ನನ್ನು ದಾನ ಮಾಡಿ, ತಂದೆಗೆ ಪುನರ್ಜನ್ಮ ನೀಡಿದ್ದಾಳೆ.
ಈ ಬಗ್ಗೆ ವಾಣಿಜ್ಯೋದ್ಯಮಿ ಹರ್ಷ ಗೋಯೆಂಕಾ ಅವರು ಯುವತಿ ತಂದೆ ಮೇಲಿಟ್ಟಿರುವ ಪ್ರೀತಿಗೆ ಮನಸೋತಿದ್ದು, ಟ್ವೀಟ್ ಮಾಡಿ ಯುವತಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Rakhi Dutta, a 19 year donated 65% of her liver to her father who was suffering from a serious liver ailment, without even thinking of the scars, pain or any future threat.
A daughter’s love for her father is always very special.
An answer to all who think daughters are useless.. pic.twitter.com/BMbRaMhM88
— Harsh Goenka (@hvgoenka) April 18, 2019
ಟ್ವೀಟ್‍ನಲ್ಲಿ ಏನಿದೆ?
ರಾಖಿ ದತ್ತ(19) ಲಿವರ್‍ನ ಕಾಯಿಲೆಯಿಂದ ಬಳಲುತ್ತಿದ್ದ 65 ವರ್ಷದ ತಂದೆಗೆ ತನ್ನ ಲಿವರ್ ದಾನ ಮಾಡಿದ್ದಾಳೆ. ದೇಹದ ಮೇಲೆ ಲಿವರ್ ಶಸ್ತ್ರಚಿಕಿತ್ಸೆಯ ಕಲೆ ಉಳಿದುಕೊಳ್ಳುತ್ತದೆ, ಮುಂದಿನ ಜೀವನದಲ್ಲಿ ಇದರಿಂದ ತೊಂದರೆಯಾಗಬಹುದು ಎನ್ನುವುದನ್ನೂ ಯೋಚಿಸದೇ ತಂದೆಯ ಜೀವ ಉಳಿಸಿದ್ದಾಳೆ. ಹೆಣ್ಣು ಮಕ್ಕಳಿಗೆ ತಂದೆ ಎಂದರೆ ವಿಶೇಷ ಪ್ರೀತಿ ಇರುತ್ತೆ. ಹೆಣ್ಣು ಮಕ್ಕಳು ಎಂದರೆ ಮೂಗು ಮುರಿಯುವರಿಗೆ ಇದೊಂದು ಉತ್ತಮ ಉದಾಹರಣೆ ಎಂದು ಗೋಯೆಂಕಾ ಟ್ವೀಟ್ ಮಾಡಿದ್ದಾರೆ.
ಸದ್ಯ ಈ ಟ್ವೀಟ್ ಸಖತ್ ವೈರಲ್ ಆಗಿದ್ದು, ಈ ಟ್ವೀಟ್ ಅನ್ನು 22 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ 5 ಸಾವಿರಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.
This made me miss my father… Wish he was around.
Indeed this act can only be done by a daugther
— Ria (@RiaRevealed) April 19, 2019