ತೆಲುಗಿನ ಖ್ಯಾತ ನಟ ನಾಗಚೈತನ್ಯ ನಟಿ ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶೋಭಿತಾ ಮತ್ತು ನಾಗ ಚೈತನ್ಯಗೆ ಟಾಂಗ್ ಕೊಡುವಂತೆ ಈ ಹಿಂದೆ ಸಮಂತಾ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದರು. ಎಕ್ಸ್ ಗಳ ವಿಚಾರ ಬಿಟ್ಟುಬಿಡಿ ಎನ್ನುವಂತೆ ಟ್ರೋಲ್ ಮಾಡುತ್ತಿದ್ದವರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಶೋಭಿತಾ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
Advertisement
ಸಮಂತಾ ಬರಹಕ್ಕೆ ಪ್ರತ್ಯುತ್ತರ ಎನ್ನುವಂತೆ ಶೋಭಿತಾ ಮಧ್ಯೆದ ಬೆರಳು ತೋರಿಸಿದ್ದಾರೆ. ಹಾಗಾಗಿ ಮತ್ತೆ ನಟಿಯರ ಜಟಾಪಟಿ ಶುರುವಾಗಿದೆ. ಸಮಂತಾ ಕೆಟ್ಟದ್ದಾಗಿ ಪ್ರತಿಕ್ರಿಯೆ ನೀಡದೇ ಇದ್ದರೂ, ಶೋಭಿತಾ ಆ ರೀತಿಯ ವರ್ತಿಸುವುದು ಸರಿಯಲ್ಲವೆಂದು ಸಮಂತಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಆದರೆ, ನಾಗಚೈತನ್ಯ ಅವರನ್ನು ಈ ವಿಷಯದಲ್ಲಿ ಸುಖಾಸುಮ್ಮನೆ ಎಳೆತರಲಾಗುತ್ತಿದೆ ಎಂದು ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ಇದನ್ನೂ ಓದಿ:ಮಲಯಾಳಂ ನಟಿ ಅಂಬಿಕಾ ರಾವ್ ನಿಧನ
Advertisement
Advertisement
ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ವಿಚಾರ ಕಳೆದೊಂದು ವಾರದಿಂದ ಸಖತ್ ಸದ್ದು ಮಾಡುತ್ತಿದೆ. ಅವರಿಬ್ಬರೂ ಬರೀ ಡೇಟಿಂಗ್ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯೂ ಹರಡಿದೆ. ಅದಕ್ಕೆ ನಾಗಚೈತನ್ಯ ಕುಟುಂಬ ಸಹ ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತವಾಗಿ ಯಾರೂ ಹೇಳಿಕೊಂಡಿಲ್ಲ. ಆದರೂ, ಡೇಟಿಂಗ್ ವಿಚಾರ ಮಾತ್ರ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ.