ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್-1’ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಟ್ರೈಲರ್ (Kantara Chapter1 Trailer) ಹೊರಬರಲು ಮುಹೂರ್ತ ಫಿಕ್ಸ್ ಆಗಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಪ್ಲ್ಯಾನ್ ನಡೀತಿದೆ. ಇಡೀ ಭಾರತೀಯ ಚಿತ್ರರಂಗವೇ ‘ಕಾಂತಾರ’ ಹೊಸ ಅಧ್ಯಾಯ ಸಂಭ್ರಮಿಸಲಿದೆ. ಅದಕ್ಕಾಗಿ ಸ್ಟಾರ್ ನಟರು ಹೊಂಬಾಳೆ ಜೊತೆ ಕೈ ಜೋಡಿಸುತ್ತಿದ್ದಾರೆ. ಈ ನಡುವೆಯೇ ಕಾಂತಾರಾ ಚಾಪ್ಟರ್-1 ಟ್ರೈಲರ್ ಲಾಂಚ್‌ಗೆ ದಿನಾಂಕ, ಸಮಯ ನಿಗದಿಪಡಿಸಿರುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ (Hombale Films) ಅಧಿಕೃತ ಮಾಹಿತಿ ಪ್ರಕಟಿಸಿದೆ.
View this post on Instagram
ಸೆಪ್ಟೆಂಬರ್ 22ರ ಸೋಮವಾರ ಮಧ್ಯಾಹ್ನ 12:45 ಗಂಟೆಗೆ ‘ಕಾಂತಾರ ಚಾಪ್ಟರ್-1’ ಸಿನಿಮಾ ಟ್ರೈಲರ್ ಬಿಡುಗಡೆ ಆಗಲಿದೆ. ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ದೊಡ್ಡ ಈವೆಂಟ್ ಮಾಡಿ ಟ್ರೈಲರ್ ರಿಲೀಸ್ ಮಾಡುವ ಸಾಧ್ಯತೆಯಿದೆ. ಇನ್ನು ಹೃತಿಕ್ ರೋಷನ್ ಹಿಂದಿ ವರ್ಷನ್ ಟ್ರೈಲರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಿದ್ದಾರೆ. ಅದೇ ರೀತಿ, ತೆಲುಗಿಗೆ ಪ್ರಭಾಸ್, ಮಲಯಾಳಂಗೆ ಪೃಥ್ವಿರಾಜ್ ಸುಕುಮಾರನ್, ತಮಿಳಿಗೆ ಶಿವಕಾರ್ತಿಕೇಯನ್ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ.,
View this post on Instagram
ಪಿತೃಪಕ್ಷ, ಅಮಾವಾಸ್ಯೆ, ಗ್ರಹಣ ಅಂತೆಲ್ಲಾ ಇಷ್ಟು ದಿನ ‘ಕಾಂತಾರ- 1’ ಚಿತ್ರದ ಪ್ರಚಾರ ಮಾಡದೇ ಚಿತ್ರತಂಡ ಸುಮ್ಮನಿತ್ತು. ಶೀಘ್ರದಲ್ಲೇ ಗ್ರಹಣ ಕಳೆದು ನವರಾತ್ರಿ ಸಂಭ್ರಮ ಶುರುವಾಗ್ತಿದೆ. ಅದೇ ಜೋಶ್‌ನಲ್ಲಿ ಚಿತ್ರದ ಪ್ರಚಾರಕ್ಕೆ ಚಾಲನೆ ಕೊಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಬರೀ ಮೇಕಿಂಗ್ ವೀಡಿಯೋ ಹಾಗೂ ಪೋಸ್ಟರ್‌ಗಳಿಂದಲೇ ಸಿನಿಮಾ ಇನ್ನಿಲ್ಲದ ನಿರೀಕ್ಷೆ ಹುಟ್ಟುಹಾಕಿದೆ. ಒಂದು ದಿನ ಮೊದಲೇ ದೊಡ್ಡಮಟ್ಟದಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಪ್ಲ್ಯಾನ್ ಮಾಡಲಾಗ್ತಿದೆ.
ಐಮ್ಯಾಕ್ಸ್ ವರ್ಷನ್‌ನಲ್ಲಿ ಕೂಡ ‘ಕಾಂತಾರ- 1’ ಸಿನಿಮಾ ಬಿಡುಗಡೆ ಆಗ್ತಿದೆ. ವಿದೇಶಗಳಲ್ಲಿ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸೆಪ್ಟೆಂಬರ್ 25ಕ್ಕೆ ಭಾರತದಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗುವ ನಿರೀಕ್ಷೆಯಿದೆ. 3 ವರ್ಷಗಳ ಬಳಿಕ ‘ಕಾಂತಾರ’ ಸಿನಿಮಾ ಪ್ರೀಕ್ವೆಲ್ ಬರ್ತಿದೆ. ಹಾಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪ್ರೀರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಓಟಿಟಿ, ಸ್ಯಾಟಲೈಟ್ ಅಂತೆಲ್ಲಾ ನಾನ್ ಥ್ರಿಯೇಟ್ರಿಕಲ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ.