ಮೈಸೂರು: ಐತಿಹಾಸಿಕ ಮೈಸೂರು ದಸರಾ (Mysuru Dasara) ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ವೀಕ್ಷಣೆಗೆ ಇಂದಿನಿಂದ (ಬುಧವಾರ) ಟಿಕೆಟ್ (Tickets) ಮಾರಾಟ ಪ್ರಾರಂಭವಾಗಲಿದೆ. ಇಂದು 10 ಗಂಟೆ ನಂತರ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಮಾರಾಟವಾಗಲಿದೆ. www.mysoredasara.gov.in ಮೂಲಕ ಟಿಕೆಟ್ ಖರೀದಿ ಮಾಡಬಹುದು.
ಯಾವ ಟಿಕೆಟ್‌ಗೆ ಎಷ್ಟು ಬೆಲೆ?
ಗೋಲ್ಡ್ ಕಾರ್ಡ್ – 6,000 ರೂ.
ಅರಮನೆ ಎ – 3,000 ರೂ.
ಅರಮನೆ ಬಿ – 2,000 ರೂ.
ಪಂಜಿನ ಕವಾಯತು – 500 ರೂ.
Advertisement
Advertisement
ಆನ್‌ಲೈನ್ ಹೊರತುಪಡಿಸಿ ಬೇರೆ ಕಡೆ ಟಿಕೆಟ್ ಮಾರಾಟ ಇಲ್ಲ. ಒಬ್ಬರಿಗೆ 2 ಗೋಲ್ಡ್ ಕಾರ್ಡ್ ಹಾಗೂ ಒಬ್ಬರಿಗೆ 2 ಪಾಸ್ ಖರೀದಿಗೆ ಅವಕಾಶವಿದೆ. ಇದನ್ನೂ ಓದಿ: ಮಧ್ಯರಾತ್ರಿ ತೀರ್ಥರೂಪಿಣಿಯಾಗಿ ಕಾವೇರಿಯ ದರ್ಶನ – 1 ನಿಮಿಷ ಮೊದಲೇ ತೀರ್ಥೋದ್ಭವ
Advertisement
ಗ್ಯಾರಂಟಿ ಸ್ಕೀಂ ಸರ್ಕಾರದಲ್ಲಿ ಅರಮನೆ ಒಳಗೆ ದಸರಾ ಜಂಬೂ ಸವಾರಿ ವೀಕ್ಷಣೆ ದುಬಾರಿ ಎನಿಸಿಕೊಂಡಿದೆ. ಅರಮನೆ ಆವರಣದಲ್ಲಿ ದಸರಾ ವೀಕ್ಷಣೆಗೆ 3 ಹಾಗೂ 2 ಸಾವಿರ ರೂ. ದರ ನಿಗದಿಯಾಗಿದೆ. ಆನ್ ಲೈನ್ ಮೂಲಕ ಟಿಕೆಟ್ ಖರೀದಿಗೆ ಅವಕಾಶವಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಟಿಕೆಟ್ ಖರೀದಿಸಬಹುದು. ಮೈಸೂರುದಸರಾ.ಗವ್.ಇನ್ ವೆಬ್ ಸೈಟ್ ಮೂಲಕ ಟಿಕೆಟ್ ಖರೀದಿ ಮಾಡಬಹುದು.
Advertisement
ಈ ಹಿಂದೆ 1,000 ರೂ. ಇದ್ದ ಟಿಕೆಟ್ ಬೆಲೆ ಇದೀಗ ಏಕಾಏಕಿ 2-3 ಸಾವಿರ ರೂ.ಗೆ ಏರಿಕೆಯಾಗಿದೆ. ಗೋಲ್ಡ್ ಕಾರ್ಡ್‌ಗೆ 6,000 ರೂ. ದರ ನಿಗದಿಯಾಗಿದ್ದು, ಪಂಜಿನ ಕವಾಯತು ವೀಕ್ಷಣೆಗೆ 500 ರೂ. ದರ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ನವರಾತ್ರಿ 2023: ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ – ಪುರಾಣ ಕಥೆ ಏನು?
Web Stories