ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ- ಗಗನಕ್ಕೇರಿದ ಹೂ, ಹಣ್ಣುಗಳ ದರ

Public TV
1 Min Read
MARKET RUSH

– ಆಯುಧ ಪೂಜೆಗೆ ಖರೀದಿ ಭರಾಟೆ..!

ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ (Vijaya  Dashami) ಸಂಭ್ರಮ ಮನೆ ಮಾಡಿದೆ. ಇಂದು ಆಯುಧ ಪೂಜೆ (Ayudha Pooje) ಹಿನ್ನೆಲೆ ಹೂವು-ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ನಗರದ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ, ಬಸವನಗುಡಿ, ಮಡಿವಾಳ ಮಾರ್ಕೆಟ್‍ಗಳಲ್ಲಿ ಜನಸ್ತೋಮವೇ ತುಂಬಿ ತುಳುಕುತ್ತಿದೆ.

ಹೌದು, ಬೆಲೆ ಏರಿಕೆ ನಡುವೆಯೂ ಕೆ.ಆರ್ ಮಾರ್ಕೆಟ್‍ನಲ್ಲಿ (KR Market) ಹೂ, ಹಣ್ಣು, ತರಕಾರಿ ಖರೀದಿಗೆ ಜನಸಾಗರವೇ ಹರಿದುಬಂದಿದೆ. ಆಯುಧ ಪೂಜೆಗೆ ಬೂದುಕುಂಬಳಕಾಯಿ ಹಾಗೂ ಬಾಳೆ ಕಂಬಕ್ಕೆ ಫುಲ್ ಡಿಮ್ಯಾಂಡ್ ಇದ್ದು, ಹಬ್ಬದ ಸಂಭ್ರಮದಲ್ಲಿ ಇರುವವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಹೂ ಹಣ್ಣುಗಳ ದರ ಡಬಲ್ ಏರಿಕೆಯಾಗಿದೆ. ಇದನ್ನೂ ಓದಿ: ನವರಾತ್ರಿ ಹಬ್ಬ – ಆಯುಧ ಪೂಜೆ ಮಾಡೋದು ಯಾಕೆ? ಪುರಾಣ ಕಥೆ ಏನು?

ಹೂವಿನ ದರ..!
ಮಲ್ಲಿಗೆ- 1,200 ರೂ.
ಸೇವಂತಿಗೆ- 300 ರೂ.
ಗುಲಾಬಿ- 200 ರೂ.
ಕನಕಾಂಬರ- 1,300 ರೂ.
ಮಳ್ಳೆ ಹೂವು- 1000 ರೂ.

ಹಣ್ಣುಗಳ ದರವೂ ದುಬಾರಿ..!
ಏಲಕ್ಕಿ ಬಾಳೆಹಣ್ಣು- 100 ರೂ.
ಅನಾನಸ್- 70 ರೂ.
ದಾಳಿಂಬೆ- 150 ರೂ.
ಸೇಬು- 180 ರೂ.

ಒಟ್ಟಿನಲ್ಲಿ ಈ ಬಾರಿ ದಸರ ಹಬ್ಬಕ್ಕೆ ಕೊಂಚ ಬೆಲೆ ಏರಿಕೆಯಾಗಿದ್ದರೂ ಸಹ ಜನರೆಲ್ಲರೂ ನಾಡಿನ ಹಬ್ಬದ ಆಚರಣೆ ಸಂಭ್ರಮದಲ್ಲಿದ್ದಾರೆ. ಕೊಂಚ ಬೆಲೆ ಏರಿಕೆಗೆ ರೈತ ನಗು ಬಿರಿದ್ರೆ ಗ್ರಾಹಕರು ಉಸಿರು ಬಿಟ್ಟಿದ್ದಾರೆ.

Web Stories

Share This Article