ಮೈಸೂರು: ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದೆ. ಹೀಗಾಗಿ ದಸರಾ ಗಜಪಡೆಯ ತಾಲೀಮು ಕೂಡ ಮೈಸೂರಿನಲ್ಲಿ ಆರಂಭವಾಗಿದೆ. ಮೈಸೂರಿನ ರಾಜಪಥದಲ್ಲಿ ಇಂದು ಗಜಪಡೆ ತಾಲೀಮು ಆರಂಭಿಸಿದೆ.
ಮೈಸೂರಿನಲ್ಲಿ 40 ದಿನ ಗಜಪಡೆಯೂ ವಾಕಿಂಗ್ ಮಾಡುತ್ತದೆ. ದಸರಾ ತಾಲೀಮು ರೂಪದ ವಾಕಿಂಗ್ ಅನ್ನು ಗಜಪಡೆಯೂ ಬೆಳಗ್ಗೆ ಮತ್ತು ಸಂಜೆ ಮಾಡಲಿವೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ವಾಕಿಂಗ್ ಪ್ರತಿದಿನ ಅರಮನೆಯ ಆವರಣದಿಂದ ಆರಂಭವಾಗುತ್ತಿತ್ತು. ಈ ಬಾರಿ ದಸರಾದಲ್ಲಿ ಎಲ್ಲ 13 ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಲಿದ್ದು, ಇದುವರೆಗೆ ಆರು ಆನೆಗಳು ನಡಿಗೆ ತಾಲೀಮು ನಡೆಸುತ್ತಿದೆ. ಶುಕ್ರವಾರ ಸಂಜೆಯಷ್ಟೇ ಮೈಸೂರಿಗೆ ಆಗಮಿಸಿದ್ದ ಎರಡನೇ ತಂಡದ ಆರು ಆನೆಗಳು ಮೊದಲನೇ ದಿನ ತಾಲೀಮು ನಡೆಸುತ್ತಿವೆ. ಇದನ್ನು ಓದಿ: ಮೈಸೂರೊಳಗೆ ದಸರಾ ಆನೆ ಟೀಂ ವಾಕಿಂಗ್- ವಿಡಿಯೋ ನೋಡಿ
ಧನಂಜಯ ಆನೆಗೆ ಭಾರ ಹೊರುವ ತಾಲೀಮು ನೀಡಲಾಗಿದ್ದು, ಇಂದು ಧನಂಜಯನ ಬೆನ್ನಿಗೆ ಸುಮಾರು 300 ಕೆ.ಜಿ. ತೂಕದ ಭಾರವನ್ನು ಹೊರಿಸಲಾಗುತ್ತಿದೆ. ಅರ್ಜುನ ಶುಕ್ರವಾರ ಮರಳು ಮೂಟೆ ಹೊತ್ತಿದ್ದಾನೆ. ಇನ್ನೂ ಅರಣ್ಯ ಇಲಾಖೆ ಅಂಬಾರಿ ಹೊರಲು ಅರ್ಜುನ, ಧನಂಜಯ, ಬಲರಾಮನಿಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ.
ತಾಲೀಮು ಏಕೆ?
ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=cziWRBz4mkg