ಬೆಂಗಳೂರು: ಇಲ್ಲಿನ ಆರ್ಟ್ ಆಫ್ ಲಿವಿಂಗ್ (Art of Living) ಅಂತಾರಾಷ್ಟ್ರೀಯ ಕೇಂದ್ರದಲ್ಲಿ ದುರ್ಗಾಷಮಿ ಪೂಜಾ ಮಹೋತ್ಸವದ (Dasara Celebration) ಅದ್ಧೂರಿ ಆಚರಣೆ ನಡೆಯಿತು. 82 ದೇಶಗಳಿಂದ ಒಂದೂವರೆ ಲಕ್ಷ ಜನರು ವಿಶೇಷ ಹೋಮ, ಮಂತ್ರೋಚ್ಚಾರಣೆ, ಭಜನೆ, ಧ್ಯಾನದ ಮೂಲಕ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು.
Advertisement
ವಿಶ್ವದ ಶಾಂತಿಗಾಗಿ ಹಾಗೂ ಯೋಗಕ್ಷೇಮಕ್ಕಾಗಿ ಶಕ್ತಿಶಾಲಿ ಚಂಡಿ ಹೋಮ ನೆರವೇರಿಸಲಾಯಿತು. ಮಂತ್ರೋಪಚಾರಣೆಯೊಂದಿಗೆ 108 ಗಿಡಮೂಲಿಕೆಗಳು, ಹಣ್ಣುಗಳು ಹಾಗೂ ವಿಶೇಷ ಪದಾರ್ಥಗಳನ್ನು ಹೋಮಕ್ಕೆ ಅರ್ಪಣೆ ಮಾಡಲಾಯಿತು. 700 ಶ್ಲೋಕಗಳನ್ನೊಳಗೊಂಡ ದುರ್ಗಾ ಸಪ್ತಶತಿ ಪಾರಾಯಣ ಮಾಡಿದ ನಂತರ ಗೋಪೂಜೆ, ಗಜಪೂಜೆ, ಕನ್ಯಾಪೂಜೆ, ವಟುಪೂಜೆ ಹಾಗೂ ದಂಪತಿ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ: ಸ್ವಚ್ಛನಗರಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಕುಸಿದ ಬೆಂಗಳೂರು- ಬಿಗ್‌ಶೇಮ್ ಎಂದು ಕುಟುಕಿದ ಪೈ
Advertisement
Advertisement
ಈ ಕುರಿತು ಮಾತನಾಡಿದ ಶ್ರೀ ಶ್ರೀ ರವಿಶಂಕರ್ ಗುರೂಜಿ (Sri Sri Ravi Shankar Guruj) ಅವರು, ಚಂಡಿ ಎಂದರೆ ಬಹಳ ಶಕ್ತಿಶಾಲಿ ಎಂದರ್ಥ. ಚಂಡಿಹೋಮದ ಪ್ರತಿಯೊಂದು ಮಂತ್ರದೊಡನೆ ಒಂದು ಗಿಡಮೂಲಿಕೆ ಸಂಬಂಧ ಪಟ್ಟಿದೆ. ಪ್ರತೀ ಮಂತ್ರವೂ ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಇದು ವಾತಾವರಣದಲ್ಲಿ ಸಕಾರಾತ್ಮಕ ಕಂಪನಗಳನ್ನುಂಟುಮಾಡುತ್ತದೆ. ಈ ನವರಾತ್ರಿ ಉತ್ಸವವು ಸಂಕುಚಿತ ಮನಸ್ಸಿನಿಂದ ವಿಶಾಲ ಮನಸ್ಸಿನ ಚಲನೆಯ ಸಂಭ್ರಮಾಚರಣೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಾಂಡಿಯಾ ಪೆಂಡಾಲ್‌ನಲ್ಲಿ ಮುಸ್ಲಿಮ್ ಯುವಕರಿಗೆ ಏನು ಕೆಲಸ – ಮುತಾಲಿಕ್ ಪ್ರಶ್ನೆ
Advertisement
ನವರಾತ್ರಿಯ ಮತ್ತೊಂದು ವಿಶೇಷವೆಂದರೆ ಆಶ್ರಮದ ಅಡುಗೆ ಮನೆಯಲ್ಲಿ ಪ್ರತಿನಿತ್ಯವೂ ಸಾವಿರಾರು ಭಕ್ತರಿಗಾಗಿ ಪ್ರಸಾದ ವಿತರಣೆ ಮಾಡಲಾಯಿತು. ಅದಕ್ಕಾಗಿ 60 ಟನ್ ಅಕ್ಕಿ, 40 ಟನ್ ಗೋಧಿಹಿಟ್ಟು, 20 ಟನ್ ಬೇಳೆ, 40,000 ಲೀಟರ್ ಎಣ್ಣೆ, 45,000 ಲೀಟರ್ ಹಾಲು, 250 ಟನ್ ತರಕಾರಿ, 10,000 ಲೀಟರ್ ಮೊಸರನ್ನು ಬಳಸಲಾಯಿತು.