ಶಿವಮೊಗ್ಗ : ದಸರಾ (Dasara) ಅಂದ್ರೆ ಮೈಸೂರು, ಮೈಸೂರು ಅಂದ್ರೆ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ. ಹೌದು! ಮೈಸೂರು ದಸರಾ ರಾಜ್ಯ, ದೇಶ ಮಾತ್ರ ಅಲ್ಲ, ವಿಶ್ವದ ಗಮನ ಸೆಳೆದಿದೆ. ಅದೇ ರೀತಿ ರಾಜ್ಯದ ಎರಡನೇ ದಸರಾ ಶಿವಮೊಗ್ಗದಲ್ಲಿ (Shivamogga Dasara) ನಡೆಯಲಿದೆ.
ಶಿವಮೊಗ್ಗದಲ್ಲಿ ಈ ಮೊದಲು ನಗರದ ಆಯಾ ದೇವಸ್ಥಾನಗಳಲ್ಲಿ ದಸರಾ ಆಚರಣೆ ನಡೆಯತ್ತಿತ್ತು. ಬಳಿಕ ʻಶಿವಮೊಗ್ಗ ದಸರಾʼಎಂಬ ರೂಪ ಪಡೆದುಕೊಂಡಿದ್ದು 1980ರಲ್ಲಿ. ಆಗಿನ ಕಾಲಘಟ್ಟದ ಪತ್ರಕರ್ತ ಹಾಗೂ ನಗರಸಭೆ ಅಧ್ಯಕ್ಷರಾಗಿದ್ದ ಎಂ.ನಾಗೇಂದ್ರ ರಾವ್ ಅವರು ʻಶಿವಮೊಗ್ಗ ದಸರಾʼಗೆ ಒಂದು ರೂಪ ತಂದುಕೊಟ್ಟರು. ಶಿವಮೊಗ್ಗದಲ್ಲಿ ವಿಜ್ರಂಭಣೆಯ ದಸರಾ ಆಚರಿಸಬೇಕೆಂಬ ಉದ್ದೇಶದಿಂದ ಈ ಆಚರಣೆಗೆ ಹೊಸ ಭಾಷ್ಯ ಬರೆದರು.
Advertisement
Advertisement
ʻಶಿವಮೊಗ್ಗ ದಸರಾʼ ಆರಂಭಕ್ಕೂ ಮೊದಲು ಆಯಾ ದೇವಸ್ಥಾನಗಳಲ್ಲಿ ಅಂಬು ಕಡಿಯುವ ಪ್ರತೀತಿ ನಡೆದುಕೊಂಡು ಬರುತ್ತಿತ್ತು. ಆರಂಭದಲ್ಲಿ ಮರದ ಅಂಬಾರಿಯನ್ನು ವಾಹನದ ಮುಖಾಂತರ ನೆಹರೂ ಕ್ರೀಡಾಂಗಣಕ್ಕೆ ತಂದು ಅಂಬು ಕಡಿಯಲಾಗುತ್ತಿತ್ತು. ಕಳೆದ 10 ವರ್ಷದಿಂದ ಬೆಳ್ಳಿಯ ಅಂಬಾರಿಯನ್ನು ಆನೆಯ ಮೇಲೆ ಕೂರಿಸಿ, ಅದರಲ್ಲಿ ಚಾಮುಂಡೇಶ್ವರಿ ವಿಗ್ರಹ ಇರಿಸಿ. ಅಲ್ಲಮಪ್ರಭು ಫ್ರೀಡಂ ಪಾರ್ಕ್‌ನವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಫ್ರೀಡಂ ಪಾರ್ಕ್ ಆವರಣದಲ್ಲಿ ಅಂಬು ಕಡಿದು ಬಳಿಕ ವಿಜಯದಶಮಿ ಆಚರಿಸಲಾಗುತ್ತದೆ.
Advertisement
Advertisement
ಮಹಾನಗರ ಪಾಲಿಕೆ ವತಿಯಿಂದ 9 ದಿನಗಳ ಕಾಲ ಕಲಾ, ಸಾಂಸ್ಕೃತಿಕ, ಮಕ್ಕಳ, ಮಹಿಳಾ ದಸರಾ ಹೀಗೆ ವಿವಿಧ ದಸರಾಗಳನ್ನು ಸಂಘಟಿಸಲಾಗುತ್ತದೆ. ಅದಕ್ಕೋಸ್ಕರ ಸರ್ಕಾರದಿಂದ ಸಾಕಷ್ಟು ಅನುದಾನ ಸಹ ನೀಡುತ್ತಾ ಬಂದಿದೆ.