ದರ್ಶನ್ ಪುತ್ರ ವಿನೀಶ್ ನಟನೆಯ ಹಾಡು ಬಿಡುಗಡೆ

Public TV
1 Min Read
darshan vineesh

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರ ಬಿಡುಗಡೆಯಾಗಿ 15 ದಿನಗಳ ಬಳಿಕ ಚಿತ್ರದ ವಿಡಿಯೋ ಹಾಡು ಬಿಡುಗಡೆ ಆಗಿದೆ.

ಈ ಬಗ್ಗೆ ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ನಿಮ್ಮ ಪ್ರೀತಿಯ `ಯಜಮಾನ’ ಚಿತ್ರದ ಶಿವನಂದಿ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ನೀವು ತೋರಿರುವ ಪ್ರೀತಿ-ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿ” ಎಂದು ಟ್ವೀಟ್ ಮಾಡಿ ವಿಡಿಯೋ ಲಿಂಕ್ ಹಾಕಿದ್ದಾರೆ.

ಚಿತ್ರ ಬಿಡುಗಡೆ ಮುನ್ನವೇ ಈ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್ ಆಗಿತ್ತು. ಈಗ ಈ ಹಾಡು ಬಿಡುಗಡೆ ಆಗಿದ್ದು, ಈ ಹಾಡಿನಲ್ಲಿ ಸ್ಯಾಂಡಲ್‍ವುಡ್ ನಟರಾದ ಪ್ರಜ್ವಲ್ ದೇವರಾಜ್, ಪ್ರೇಮ್, ವಿನೋದ್ ಪ್ರಭಾಕರ್, ಶರಣ್, ಚಿರಂಜೀವಿ ಸರ್ಜಾ ಹಾಗೂ ದರ್ಶನ್ ಅವರ ಮಗ ವಿನೀಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

darshan vineesh 3

ಈ ಹಾಡಿನಲ್ಲಿ ಚಿತ್ರದ ನಾಯಕನ ವರ್ಣನೆಯನ್ನು ಹೇಳಲಾಗಿದೆ. ಶಿವನಂದಿ ಪಾತ್ರದಲ್ಲಿ ಕಾಣಿಸಿಕೊಂಡ ದರ್ಶನ್ ಇಂಟ್ರಡಕ್ಷನ್ ಹಾಡು ಇದಾಗಿದ್ದು, ಸಿನಿಮಾ ಟೈಟಲ್ ಗೆ ತಕ್ಕಂತೆ ಯಜಮಾನನ ಗುಣಗಳನ್ನು ಹಾಡಿನ ರೂಪದಲ್ಲಿ ತೋರಿಸಲಾಗಿದೆ.

darshan vineesh 2

ಯಾಜಮಾನ ಚಿತ್ರಕ್ಕೆ ದರ್ಶನ್‍ಗೆ ನಾಯಕಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ನಟಿಸಿದ್ದಾರೆ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರ ಮಿಡಿಯಾ ಹೌಸ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ನಿರ್ದೇಶಕ ಪೊನ್ನುಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *