ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ಮೆಜೆಸ್ಟಿಕ್‌ನಲ್ಲಿರುವ ಅಣ್ಣಮ್ಮ ದೇಗುಲಕ್ಕೆ (Annamma Devi Temple) ಭೇಟಿ ನೀಡಿದ್ದಾರೆ. ದೇವಿಗೆ ವಿಜಯಲಕ್ಷ್ಮಿ ಹರಕೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ದರ್ಶನ್ ಬಂದೋಬಸ್ತ್‌ಗೆ 3 ಲಕ್ಷ ರೂ. ಕಟ್ಟಿಸಿಕೊಂಡ್ರಾ ಪೊಲೀಸರು?
ದರ್ಶನ್ ಜೈಲಿನಲ್ಲಿದ್ದಾಗ ವಿಜಯಲಕ್ಷ್ಮಿ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಇದೀಗ ಅಣ್ಣಮ್ಮ ದೇವಿಗೆ ದರ್ಶನ್ ಪತ್ನಿ ಹರಕೆ ಸಲ್ಲಿಸಿದ್ದಾರೆ. ಅಣ್ಣಮ್ಮ ದೇವಿಗೆ ಸೀರೆ ಜೊತೆ ಮಡಿಲಕ್ಕಿ ತುಂಬಿ ಹರಕೆ ತೀರಿಸಿದ್ದಾರೆ. ಇದನ್ನೂ ಓದಿ:ಕೊಲೆ ಕೇಸ್ ಸಾಕ್ಷ್ಯಿಧಾರನ ಜೊತೆ ಪ್ರಭಾವ ಬೀರುತ್ತಿದ್ದಾರಾ ದರ್ಶನ್?
ಅಂದಹಾಗೆ, ರಾಜಸ್ಥಾನದಲ್ಲಿ ನಡೆದ ‘ಡೆವಿಲ್’ ಶೂಟಿಂಗ್‌ನಲ್ಲಿ ದರ್ಶನ್ ಜೊತೆ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಕೂಡ ಭಾಗಿಯಾಗಿದ್ದರು. ಕಳೆದ ವಾರ ಏ.4ರಂದು ಬೆಂಗಳೂರಿಗೆ ಚಿತ್ರೀಕರಣ ಮುಗಿಸಿ ವಾಪಸ್ ಆದರು.