ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ವಾರ್ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು (Darshan) ನೋಡಲು ಇಂದು ಪರಪ್ಪನ ಅಗ್ರಹಾರಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ತಮ್ಮ ದಿನಕರ್ ಭೇಟಿ ನೀಡಿದರು.
ಕಳೆದ ವಾರವಷ್ಟೇ ಡೆವಿಲ್ ಚಿತ್ರ ರಿಲೀಸ್ ಆಗಿದೆ. ಇದರ ನಡುವೆ ಸುದೀಪ್ ಮಾತಿನಿಂದ ಹೊರಗಡೆ ಕಿಚ್ಚ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿದೆ. ಈ ಘಟನೆಯ ನಂತರ ಇಂದು ಮೊದಲ ಬಾರಿಗೆ ವಿಜಯಲಕ್ಷ್ಮಿ, ದರ್ಶನ್ ಅವರನ್ನು ಭೇಟಿ ಮಾಡಿದ್ದು, ಕೆಲಹೊತ್ತು ಮಾತನಾಡಿದ್ದಾರೆ. ಇದನ್ನೂ ಓದಿ: ರೂಮಿನಲ್ಲಿ ಕೆಟ್ಟ ವಾಸನೆ ಬಂದ್ರೆ ಬಿಟ್ಟಿದ್ದು ಯಾರು ಅನ್ನೋದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ: ಸುದೀಪ್
ಈ ವೇಳೆ ಹೊರಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ವಿಜಯಲಕ್ಷ್ಮಿ, ದರ್ಶನ್ ಜೊತೆ ಚರ್ಚೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಜಯಲಕ್ಷ್ಮಿ ದರ್ಶನ್ ಜೊತೆಗೆ ಸಹೋದರ ದಿನಕರ್ ತೂಗುದೀಪ ಸಹ ಜೈಲಿಗೆ ಭೇಟಿ ನೀಡಿದ್ದು, ಏನೆಲ್ಲ ವಿಚಾರವನ್ನು ಚರ್ಚೆ ಮಾಡಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಈ ನಡುವೆಯೇ ದರ್ಶನ್ ನಟನೆಯ ಡೆವಿಲ್ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾ ಕುರಿತು ದರ್ಶನ್ ಜೈಲಿನಿಂದಲೇ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದರು. ಇದನ್ನೂ ಓದಿ: ವಿಜಯಲಕ್ಷ್ಮಿ ದರ್ಶನ್ ಬೆಂಕಿ ಮಾತು – ಕಿಚ್ಚನ ವಿರುದ್ಧ ಮಾತಿನ ಯುದ್ಧಕ್ಕೆ ನಿಂತ ಡಿಬಾಸ್ ಫ್ಯಾನ್ಸ್


