ಮೈಸೂರು: ಅಪಘಾತ ಸಂಭವಿಸಿದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಕಾನೂನು ಉಲ್ಲಂಘಿಸಿದ್ದಾರೆ.
ಟ್ರಾಫಿಕ್ ನಿಯಮದ ಬಗ್ಗೆ ಮಾಧ್ಯಮಗಳಿಗೆ ನೀತಿ ಪಾಠ ಹೇಳಿದ ಚಕ್ರವರ್ತಿ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೆಲವೇ ಕ್ಷಣಗಳಲ್ಲಿ ಸಂಚಾರ ಉಲ್ಲಂಘನೆ ಮಾಡಿದ್ದಾರೆ. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಮುಂಭಾಗದಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒನ್ ವೇ ಹೋಗಿದ್ದಾರೆ. ದರ್ಶನ್ ಅವರ ಕಾರು ಒನ್ ವೇ ಸಂಚಾರದಲ್ಲಿ ಬಂದರೂ ಸಂಚಾರಿ ಪೊಲೀಸರು ಮೂಕ ಪ್ರೇಕ್ಷಕರಾದರು.
Advertisement
Advertisement
ಈ ನಿಯಮ ಉಲ್ಲಂಘನೆಯಿಂದಾಗಿ ದರ್ಶನ್ ಅವರಿಗೆ ಹೇಳೋರು ಕೇಳೋರು ಯಾರೂ ಇಲ್ಲವಾ ಚಕ್ರವರ್ತಿ ಮಾಡಿದ್ದೇ ಸರಿನಾ? ಪ್ರಶ್ನೆ ಮಾಡುವವರೂ ಯಾರು ಇಲ್ಲವಾ? ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
Advertisement
ಕೊಲಂಬಿಯಾ ಆಸ್ಪತ್ರೆಯಿಂದ ಮುಂದೆ ಹೋಗಿ 3 ಕಿ.ಮೀ ಯೂಟರ್ನ್ ಮಾಡಿಕೊಂಡು ಬರಬೇಕಾಗಿತ್ತು. ಆದರೆ ಎಡಗಡೆಗೆ ಕಾರನ್ನು ತಿರುಗಿಸಿಕೊಳ್ಳುವ ಬದಲು ಬಲಗಡೆಗೆ ಕಾರನ್ನು ತಿರುಗಿಸಿಕೊಂಡು ಒನ್-ವೇ ಅಲ್ಲೇ ಕಾರನ್ನು ಚಲಾಯಿಸಿದ್ದಾರೆ. ಅವರು ಇದ್ದ ಕಾರು ಹಾಗೂ ಇನ್ನೆರಡು ಕಾರುಗಳು ಬಲಭಾಗಕ್ಕೆ ತಿರುಗಿಸಿಕೊಂಡು ಹೋಗಿದ್ದಾರೆ.
Advertisement
ಡಿಸ್ಚಾರ್ಜ್ ಆದ ಬಳಿಕ ತೆರಳಲು ಯಾವುದೇ ರೀತಿಯ ಸ್ಪೆಶಲ್ ವ್ಯವಸ್ಥೆಯನ್ನು ಮಾಡಿರಲಿಲ್ಲ. ಪೊಲೀಸರು ತೋರಿಸಿದ ಮಾರ್ಗವೂ ಅಲ್ಲ. ಆಸ್ಪತ್ರೆಯ ಸಿಬ್ಬಂದಿ ಅವರೇ ಕೈಬಿಸಿ ಬಲಕ್ಕೆ ಚಲಾಯಿಸಿ ಎಂದು ದಾರಿ ತೋರಿಸಿದ್ದು ಬಹು ದೂರದವರೆಗೂ ಒನ್-ವೇ ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ಇದ್ದಕೊಂಡು ನಾನು ಎಲ್ಲ ನ್ಯೂಸ್ ಚಾನೆಲ್‍ಗಳನ್ನು ನೋಡಿದ್ದೇನೆ. ಊಹಾಪೋಹಗಳ ಮೇಲೆ ನೀವೇ ಎಲ್ಲವನ್ನೂ ನಿರ್ಧಾರ ಮಾಡಿಬಿಟ್ಟರೆ ಹೇಗೆ? ಕಾರಿನಲ್ಲಿ ಯುವತಿಯೊಬ್ಬರು ಇದ್ದರು ಅಂತ ವರದಿ ಮಾಡಿದ್ದೀರಿ. ಒಬ್ಬರಲ್ಲ ನಾಲ್ವರು ನನ್ನ ತೊಡೆಯ ಮೇಲೆ ಕುಳಿತಿದ್ದರು. ಒಂದು ತಿಂಗಳ ವಿಶ್ರಾಂತಿ ಬಳಿಕ ಜಿಮ್ ಮಾಡುತ್ತೇನೆ. ನಾನು ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಿಲ್ಲ. ನೋಡಿ ಮೈಕಟ್ಟು ಹೇಗಿದೆ ಅಂತಾ ತಮ್ಮ ಬಲಗೈ ತೋಳುಗಳನ್ನು ತೋರಿಸಿದರು. ವೈದ್ಯರು ಕಾಳಜಿಯಿಂದ ನೋಡಿಕೊಂಡಿದ್ದಾರೆ. ತುರ್ತು ಚಿಕಿತ್ಸೆಯ ವ್ಯವಸ್ಥೆ ಚೆನ್ನಾಗಿದ್ದು, ವೈದ್ಯರ ಕಾಳಜಿಯಿಂದ ಬೇಗ ಗುಣಮುಖನಾದೆ ಎಂದು ದರ್ಶನ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv