ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ (Darshan) ಜೈಲಿನಲ್ಲಿದ್ದುಕೊಂಡೇ ರೌಡಿಶೀಟರ್ ಮೊಬೈಲ್‌ನಿಂದ ವಿಡಿಯೋ ಕಾಲ್ ಮಾಡಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ (Police Investigation) ಮುಂದಾಗಿದ್ದಾರೆ. ಬುಧವಾರ ದರ್ಶನ್ ವಿಚಾರಣೆಯನ್ನೂ ನಡೆಸಿದ್ದಾರೆ. ಆದ್ರೆ ತನಿಖಾಧಿಕಾರಿಗಳ ಮುಂದೆ ದರ್ಶನ್ ಜಾಣನಡೆ ತೋರಿದ್ದಾರೆ ಎಂದು ತಿಳಿದುಬಂದಿದೆ.
ಅಸಲಿಗೆ ನನ್ನ ಕೋಣೆಗೆ ಬಂದಿದ್ಯಾರು ಅನ್ನೋದೇ ಗೊತ್ತಿಲ್ಲ. ನಾನು ಮಾತನಾಡಿದ ವ್ಯಕ್ತಿಯೇ ನನಗೆ ಗೊತ್ತಿಲ್ಲ ಅಂತ ದರ್ಶನ್ ಹೇಳಿದ್ದಾರಂತೆ. ಅಷ್ಟೇ ಅಲ್ಲ. ಕರೆ ಮಾಡಿದವನು ಯಾರು ಎಂಬುದೇ ಗೊತ್ತಿಲ್ಲ. ವೀಡಿಯೋ ಕಾಲ್ (Video Call) ಮಾಡಿಕೊಂಡು ಬಂದ, ದರ್ಶನ್ ಸರ್ ಇದ್ದಾರೆ ಅಂತ ಹೇಳ್ಕೊಂಡು ಬಂದ, ಹಾಗೆಯೇ ನನ್ನ ಕಡೆ ಮೊಬೈಲ್ ತಿರುಗಿಸಿದ. ಆದ್ದರಿಂದ ನಾನು ವಿಶ್ ಮಾಡಿದೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: Exclusive Video | ಜೈಲಲ್ಲಿದ್ದುಕೊಂಡೇ ವೀಡಿಯೊ ಕಾಲ್ – 25 ಸೆಕೆಂಡುಗಳ ಆ ವೀಡಿಯೋನಲ್ಲಿ ಏನಿದೆ?
ನಾನು ಸೌಜನ್ಯಕ್ಕೆ ಹಾಯ್ ಎಂದು ಪ್ರತಿಕ್ರಿಯೆ ಕೊಟ್ಟೆ, ನಾನು ಬೈಯೋದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಿದೆ ಹೊರತು, ನಾನೇ ಬೇಕೆಂದು ವೀಡಿಯೋ ಕಾಲ್ ಮಾಡಿಲ್ಲ, ಅಂತ ದರ್ಶನ್ ವಿಚಾರಣೆ ವೇಳೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ʻಡೆವಿಲ್ʼ ದರ್ಶನ್ ಜೈಲಿನಲ್ಲೂ ಬಿಂದಾಸ್ ಲೈಫು – ಕಾಸು ಕೊಟ್ರೆ ಎಲ್ಲವೂ ಖುಲ್ಲಂ ಖುಲ್ಲನಾ..?
ಏನಿದು ಆರೋಪ?
ಇದೇ ಆಗಸ್ಟ್ 25 ರಂದು ಆರೋಪಿ ನಟ ದರ್ಶನ್ ಜೈಲಿನಲ್ಲಿದ್ದುಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನಲಾದ ಫೋಟೋವೊಂದು ಭಾರೀ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ದರ್ಶನ್ ಮೊಬೈಲ್‌ನಲ್ಲಿ ವೀಡಿಯೋ ಕಾಲ್ (Video Call) ಮೂಲಕ ಆಪ್ತರೊಬ್ಬರ ಜೊತೆ ಮಾತನಾಡಿರುವ ವೀಡಿಯೋ ಸಹ ವೈರಲ್ ಆಗಿತ್ತು. ಅತ್ಯಾಪ್ತವಾಗಿ ಮಾತನಾಡಿದ್ದ ದರ್ಶನ್, ಊಟ ಆಯ್ತಾ ಚಿನ್ನ, ಆರಾಮಾಗಿದ್ದೀನಿ ಅಂತ ಹೇಳಿದ್ದರು. ಸುಮಾರು 25 ಸೆಕೆಂಡುಗಳ ಈ ವೀಡಿಯೋ ಇದಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!