ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಅಭಿನಯದ ತಾರಕ್ ಟೀಸರ್ 10 ಲಕ್ಷಕ್ಕೂ ಅಧಿಕ ಬಾರಿ ವ್ಯೂವ್ ಗಳನ್ನು ಪಡೆದಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಟೀಸರ್ ನಲ್ಲಿ ದರ್ಶನ್ ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. `ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶಿಸಿದ್ದು, ವಿಶೇಷ ಪಾತ್ರದಲ್ಲಿ ನಟ ದೇವರಾಜ್ ನಟಿಸಿದ್ದಾರೆ. ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಒಟ್ಟಾರೆ 6 ಹಾಡುಗಳಿವೆ. ಬಾಲಿವುಡ್ ಸಿಂಗರ್ ಅರಮಾನ್ ಮಲ್ಲಿಕ್ ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗಾಯಕ ವ್ಯಾಸ್, ವಿಜಯ್ ಪ್ರಕಾಶ್ ಮತ್ತು ಗಾಯಕಿಯರಾದ ಶ್ರೇಯಾ ಘೋಷಾಲ್, ಇಂದು ನಾಗರಾಜ್, ನೀತಿ ಮೋಹನ್ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ.
ಟೀಸರ್ ನೋಡಿದ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡಿದ್ದಾರೆ. ಈ ಬಾರಿಯ ದಸರಾ ವೇಳೆ ಅಂದರೆ ಇದೇ 29ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಚಿತ್ರದ ಟೀಸರ್ ನೀವೂ ನೋಡಬಹುದು.
????Thank you for all your ???? love and support. the #Teaser of #Tarak has received 1Million+ views in a very short span of time⏳. pic.twitter.com/yebzZmNI3j
— Tarak (@TarakMovie) September 18, 2017
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 49ನೇ ಚಿತ್ರದ "ತಾರಕ್" ಟೀಸರ್ ನಿಮಗಾಗಿ @dasadarshan's #Tarak Teaser – https://t.co/r1Ir7RmKMl
#ತಾರಕ್
— LahaRRRi Music (@LahariMusic) September 8, 2017
Over 3 lakh+ views for @dasadarshan's #Tarak Teaser ????https://t.co/r1Ir7RmKMl
#ತಾರಕ್ pic.twitter.com/NGYhbbsBcZ
— LahaRRRi Music (@LahariMusic) September 9, 2017