Connect with us

Cinema

ಮುನಿರತ್ನ ಕುರುಕ್ಷೇತ್ರದಲ್ಲಿ ಅರ್ಜುನನಾಗಿ ಸೋನು ಸೂದ್?

Published

on

ಬೆಂಗಳೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 50ನೇ ಚಿತ್ರ ಕುರುಕ್ಷೇತ್ರದ ಶೂಟಿಂಗ್ ಹೈದರಾಬಾದ್‍ನಲ್ಲಿ ನಡೆಯುತ್ತಿದ್ದು, ಚಿತ್ರದಲ್ಲಿ ಅರ್ಜುನ ಪಾತ್ರವನ್ನು ಸೋನು ಸೂದ್ ಮಾಡಲಿದ್ದಾರೆ ಎನ್ನುವ ಸುದ್ದಿ ಬಂದಿದೆ.

ಹೌದು. ಕುರುಕ್ಷೇತ್ರ ಚಿತ್ರದಲ್ಲಿ ನಟಿಸುವ ತಾರೆಯರ ಪಾತ್ರಗಳನ್ನೂ ಪರಿಚಯಿಸಿದ್ದರೂ ಅರ್ಜುನನ ಪಾತ್ರಕ್ಕಾಗಿ ಯಾವ ನಟನು ಆಯ್ಕೆಯಾಗಿರಲಿಲ್ಲ. ಆದರೆ ಈಗ ಪಾತ್ರವನ್ನು ಸೋನು ಸೂದ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋನು ಸೂದ್ ಕನ್ನಡದಲ್ಲಿ ಈ ಮೊದಲು ಕಿಚ್ಚ ಸುದೀಪ್ ಜೊತೆ ವಿಷ್ಣುವರ್ಧನ ಚಿತ್ರದಲ್ಲಿ ನಟಿಸಿದ್ದರು. ತನ್ನ ಪ್ರತಿಸ್ಪರ್ಧಿ ಪಾತ್ರಕ್ಕಾಗಿ ಪ್ರಶಂಸೆ ಪಡೆದಿದ್ದರು.ಮುನಿರತ್ನ ಕುರುಕ್ಷೇತ್ರದ ಚಿತ್ರಿಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ ಹಾಗೂ ಶೀಘ್ರದಲ್ಲೇ ಸೋನು ಸೂದ್ ಚಿತ್ರತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ದರ್ಶನ್ ಅಭಿನಯದ ಕ್ರಾಂತಿವೀರ ಸಂಗೋಳಿ ರಾಯಣ್ಣ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು.

ಈ ಚಿತ್ರಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್-ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಪ್ರಣಯಾ ರಾಜ ಶ್ರೀನಾಥ್ ಕುರುಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೀರ್‍ದೊಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಲಕ್ಷ್ಮೀ, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ  ಬಣ್ಣ ಹಚ್ಚಲಿದ್ದಾರೆ.

ಮುನ್ನಿರತ್ನ ಅವರ ಕನಸಿಕ ಸಿನಿಮಾ `ಕುರುಕ್ಷೇತ್ರ ಬರೋಬ್ಬರಿ 50 ರಿಂದ 60ಕೋಟಿ ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ನೂತನ ತಂತ್ರಜ್ಞನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಲಿದೆ.

ಇದನ್ನೂ ಓದಿ: ಈ 1 ಕಾರಣಕ್ಕಾಗಿ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ನಟಿಸುತ್ತಿಲ್ಲ `ಶಿವಣ್ಣ-ಅಪ್ಪು-ಕಿಚ್ಚ’

ಇದನ್ನೂ ಓದಿ:ಕುರುಕ್ಷೇತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಮಾಧ್ಯಮಗಳ ಪ್ರಶ್ನೆಗೆ ರಾಣಾ ದಗ್ಗುಬಾಟಿ ಉತ್ತರಿಸಿದ್ದು ಹೀಗೆ

Click to comment

Leave a Reply

Your email address will not be published. Required fields are marked *

www.publictv.in