– ನಟೋರಿಯಸ್ ಕೈದಿಗಳನ್ನಿರಿಸಲು 36 ಕತ್ತಲೆ ಕೋಣೆ
ಬೆಳಗಾವಿ: ಕೊಲೆ ಆರೋಪಿ ದರ್ಶನ್‌ಗೆ (Darshan) ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಸದ್ಯ ದರ್ಶನ್&ಗ್ಯಾಂಗ್‌ಗೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ದರ್ಶನ್ ಮತ್ತು ಗ್ಯಾಂಗ್ ಅನ್ನು ನಟೋರಿಯಸ್ ಕೈದಿಗಳು ಇರುವ ಬೆಳಗಾವಿಯ (Belagavi) ಹಿಂಡಲಗಾ ಜೈಲಿಗೆ (Hindalaga Jail) ಶಿಫ್ಟ್ ಮಾಡುವ ಸಾಧ್ಯತೆಯಿದೆ.
Advertisement
ರೇಣುಕಾಸ್ವಾಮಿ ಕೊಲೆ ಆರೋಪಿ, ಕಿಲ್ಲಿಂಗ್ ಸ್ಟಾರ್ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಜಾಲಿ ಲೈಫ್ ನಡೆಸುತ್ತಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಕೊಡುತ್ತಿರುವ ಫೋಟೋ ಮತ್ತು ವೀಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಪರಪ್ಪನ ಅಗ್ರಹಾರದ ಕರಾಳ ಮುಖ ಮತ್ತೊಮ್ಮೆ ಬಯಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿಯಾಗಿ ಬದುಕುತ್ತಿದ್ದ ದರ್ಶನ್ ಹಾಗೂ ಗ್ಯಾಂಗ್‌ಗೆ ಸಂಕಷ್ಟ ಫಿಕ್ಸ್ ಆಗಿದೆ. ಹಿಂಡಲಗಾ ಜೈಲಿನ `ಅಂಧೇರಿ’ ಸೆಲ್‌ಗಳಿಗೆ ಈ ಗ್ಯಾಂಗ್ ಶಿಫ್ಟ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ – ಇಂದು ನಗರದಲ್ಲಿ ಟ್ರಾಫಿಕ್ ಸಮಸ್ಯೆಯಾಗುವ ಸಾಧ್ಯತೆ
Advertisement
Advertisement
ಕರ್ನಾಟಕದ ಜೈಲುಗಳು ಅಂದರೆ ನೆನಪಾಗೋದೇ ಬೆಂಗಳೂರಿನ ಬಳಿ ಇರುವ ಪರಪ್ಪನ ಅಗ್ರಹಾರ ಮತ್ತು ಬೆಳಗಾವಿಯ ಹಿಂಡಲಗಾ ಜೈಲು ಅಥವಾ ಹಿಂಡಲಗಾ ಕೇಂದ್ರ ಕಾರಾಗೃಹ. ಸ್ಟಾರ್ ಎನಿಸಿಕೊಂಡವರು, ಪ್ರಭಾವಿಗಳು ಈ ಜೈಲುಗಳ ಊಟ ಉಂಡ ಎಷ್ಟೋ ಉದಾಹರಣೆಗಳಿವೆ. ಇದೀಗ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಫೋಟೋ ಹಾಗೂ ವೀಡಿಯೋ ವೈರಲ್ ಬೆನ್ನಲ್ಲೇ ದರ್ಶನ್ ಮತ್ತು ಗ್ಯಾಂಗ್ ಅನ್ನು ಅನ್ಯ ಜಿಲ್ಲೆಯ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಒಂದು ವೇಳೆ ಕೊಲೆ ಆರೋಪಿ ದರ್ಶನ್ ಬೆಳಗಾವಿ ಜೈಲಿಗೆ ದಾಖಲಾದರೆ ಹಿಂಡಲಗಾ ಜೈಲು ಸೇರಿದ ಮೊದಲ ನಟ ಎಂಬ ಕುಖ್ಯಾತಿಗಳಿಸಲಿದ್ದಾರೆ. ಸ್ವಾತಂತ್ರ‍್ಯ ಹೋರಾಟಗಾರರು, ರಾಜಕೀಯ ಕೈದಿಗಳು ಇತರೆ ಕೈದಿಗಳು ಈ ಜೈಲಿನಲ್ಲಿದ್ದರು. ಇದನ್ನೂ ಓದಿ: Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್ ಮೇಲೆ ಮತ್ತೆರಡು ಎಫ್‌ಐಆರ್!
Advertisement
ರಾಜ್ಯದಲ್ಲಿ ಗಲ್ಲಿಗೇರಿಸುವ ಏಕೈಕ ಜೈಲು ಎಂದರೆ ಬೆಳಗಾವಿ ಹಿಂಡಲಗಾ ಜೈಲು. ನಟೋರಿಯಸ್ ಕೈದಿಗಳನ್ನು ಇಡಲು 36 ಕತ್ತಲು ಕೋಣೆಯ ವ್ಯವಸ್ಥೆ ಬೆಳಗಾವಿ ಜೈಲಿನಲ್ಲಿದೆ. ಅದರಲ್ಲಿ 15 ಕೋಣೆಗಳು ಖಾಲಿ ಇದೆ. ಹೀಗಾಗಿ ಬೆಳಗಾವಿ ಹಿಂಡಲಗಾ ಜೈಲಿನ ಬಂದೋಬಸ್ತ್ ವ್ಯವಸ್ಥೆ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಈಗಾಗಲೇ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ, ದಂಡುಪಾಳ್ಯ ಗ್ಯಾಂಗ್, ವೀರಪ್ಪನ್ ಸಹಚರರು, ಸೈನೈಡ್ ಮಲ್ಲಿಕಾ, ಬಳ್ಳಾರಿ ನಾಗ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ ಹಲವರು ಸೆರೆವಾಸ ಅನುಭವಿಸಿದ್ದಾರೆ. ಇದನ್ನೂ ಓದಿ: ಮೋದಿ ಉದ್ಘಾಟಿಸಿದ್ದ ಶಿವಾಜಿ ಮಹರಾಜ್ ಪ್ರತಿಮೆ 1 ವರ್ಷ ಪೂರ್ಣಗೊಳ್ಳುವ ಮುನ್ನವೇ ಕುಸಿತ!
ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಗಳು ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಹಿಂಡಲಗಾ ಜೈಲಿಗೆ ದರ್ಶನ್ ಅಥವಾ ಗ್ಯಾಂಗ್ ಶಿಫ್ಟ್ ಮಾಡಿದರೆ ಆಗುವ ಸಾಧಕಬಾಧಕ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಈ ಮಧ್ಯೆ ಜೈಲಿನಲ್ಲಿನ ಸೆಕ್ಯುರಿಟಿ ಕುರಿತು ಕೂಡ ಮಾಹಿತಿ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಗುಡ್ & ಬ್ಯಾಡ್ ಟಚ್ ಸೆಷನ್‌ನಲ್ಲಿ ಕರಾಳ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ – ಮುಂದಾಗಿದ್ದೇನು?
ಒಟ್ಟಿನಲ್ಲಿ ಬೆಳಗಾವಿ ಹಿಂಡಲಗಾ ಜೈಲು ಈಗಾಗಲೇ ಅನೇಕ ಅಪಖ್ಯಾತಿಯಿಂದ ಸುದ್ದಿಯಲ್ಲಿತ್ತು. ಈಗ ಕೊಲೆ ಆರೋಪಿ ದರ್ಶನ್ ಗ್ಯಾಂಗ್ ಹಿಂಡಲಗಾ ಜೈಲಿಗೆ ಶಿಫ್ಟ್ ಆಗುತ್ತಾರಾ ಎಂಬ ಚರ್ಚೆ ಜೋರಾಗಿದೆ. ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕುಖ್ಯಾತ ಕೈದಿಗಳಿದ್ದಾರೆ. ಹೀಗಿರುವಾಗ ದರ್ಶನ್&ಗ್ಯಾಂಗ್ ಬಂದರೆ ಹೇಗೆ ಎಂದು ಜೈಲು ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ: Telegram Ban | ಭಾರತದಲ್ಲಿ ಬ್ಯಾನ್ ಆಗುತ್ತಾ ಟೆಲಿಗ್ರಾಂ ಆ್ಯಪ್?