ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ – ಡಿ ಬಾಸ್ ನಂಬರಿನ ಬೈಕಲ್ಲಿ ದಾಸ

Public TV
1 Min Read
darshan

ಬೆಂಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಿದೆ.

ದರ್ಶನ್ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್ ಚಿತ್ರ ಥೀಮ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ದರ್ಶನ್ ಬೈಕಿನ ಮೇಲೆ ಕುಳಿತಿದ್ದು, ಅವರ ಮುಖವನ್ನು ಬಹಿರಂಗವಾಗಿಲ್ಲ. ಅಲ್ಲದೆ ಬೈಕಿನ ಮೇಲೆ ದರ್ಶನ್ ಆನೆ ಚಿತ್ರವಿರುವ ಜಾಕೆಟ್ ಧರಿಸಿದ್ದಾರೆ. ಪೋಸ್ಟರ್ ನಲ್ಲಿ ದರ್ಶನ್ ಕೆಎ 19 ಒ 8055 ನಂಬರಿನ ಬೈಕಿನ ಮೇಲೆ ಕುಳಿತ್ತಿದ್ದಾರೆ. 8055 ಗಮನಿಸುವಾಗ ಡಿ-ಬಾಸ್ ತರ ಕಾಣುತ್ತಿದೆ. ಈ ಪೋಸ್ಟರ್ ನನ್ನು ಆದರ್ಶ್ ಮೋಹನ್ ದಾಸ್ ಡಿಸೈನ್ ಮಾಡಿದ್ದಾರೆ.

ಈ ಬಗ್ಗೆ ದರ್ಶನ್ ತಮ್ಮ ಚಿತ್ರದ ಪೋಸ್ಟರ್ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ `ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ. ಉಮಾಪತಿ ಫಿಲಂ ಬ್ಯಾನರ್ ಅಡಿಯಲ್ಲಿ, ತರುಣ್ ಸುದೀರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮಂಗಳವಾರ ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ಇಂದು ಬೆಳಗ್ಗೆ 11:04 ಗಂಟೆಗೆ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ನನ್ನ ಅಕೌಂಟ್ ಅಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಅನಾವರಣಗೊಳಿಸಲಿದ್ದೇನೆ. ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂತ ಕಲಾವಿದರ ಮೇಲೆ ಸದಾ ಇರಲಿ. ರಾಬರ್ಟ್ ಥೀಮ್ ಪೋಸ್ಟರ್ ಎಂಬ ಹ್ಯಾಶ್‍ಟ್ಯಾಗ್ ಬಳಿಸಿ ನಿಮ್ಮ ಪ್ರೀತಿಗೆ ಆಭಾರಿ ದಾಸ ದರ್ಶನ್” ಎಂದು ಟ್ವೀಟ್ ಮಾಡಿದ್ದರು.

ಈ ಹಿಂದೆ ದರ್ಶನ್ ಅವರು ಬಿಡುಗಡೆ ಮಾಡಿದ್ದ ರಾಬರ್ಟ್ ಚಿತ್ರದ ಟೈಟಲ್ ಪೋಸ್ಟರ್ ಅಭಿಮಾನಿಗಳಿಗೆ ಅಟ್ರ್ಯಾಕ್ಟ್ ಮಾಡಿತ್ತು. ಹನುಮಂತನ ಅವತಾರವೆತ್ತಿರುವ ದಾಸ ರಾಮನನ್ನು ಹೆಗಲ ಮೇಲಿರಿಸಿಕೊಂಡು ನಿಂತಿರುವ ಪೋಸ್ಟರ್ ಅಭಿಮಾನಿಗಳನ್ನು ಥ್ರಿಲ್ಲಾಗುವಂತೆ ಮಾಡಿತ್ತು. ಚೌಕಾ ಸಿನಿಮಾ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ‘ಹೆಬ್ಬುಲಿ’ ಚಿತ್ರದ ಖ್ಯಾತಿಯ ಉಮಾಪತಿ ನಿರ್ಮಾಣದಲ್ಲಿ `ರಾಬರ್ಟ್’ ಅದ್ಧೂರಿಯಾಗಿ ತಯಾರಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *