ಮೈಸೂರು: ವಿಶ್ವ ಹುಲಿ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ದಿನಾಚರಣೆ ಮತ್ತು ಯುವ ಸಂಘಟನೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಅರಣ್ಯ ಇಲಾಖೆಯ ರಾಯಭಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದರು.
ಸಮಾರಂಭದಲ್ಲಿ ಮಾತನಾಡಿದ ದರ್ಶನ್, ಕಾಡು ಉಳಿಸಿದರೆ ನಾಡು ಸುರಕ್ಷಿತವಾಗಿರಲಿದೆ. ಇತ್ತೀಚಿನ ವರ್ಷಗಳಲ್ಲಿ ಗುಬ್ಬಚ್ಚಿಗಳು ಕಾಣಿಸುತ್ತಿಲ್ಲ ಅತಿಯಾದ ಮೊಬೈಲ್ ವಿಕಿರಣದಿಂದ ಹೀಗಾಗಿದೆ ಎಂದು ವಿಶ್ಲೇಷಿಸಿದರು. ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ ಮಾತ್ರ ಪ್ರಾಣಿ ಪ್ರಿಯರಾಗುವುದಿಲ್ಲ. ಪ್ಲಾಸ್ಟಿಕ್ ಮುಕ್ತ ಮಾಡಿ ಪರಿಸರ ಉಳಿಸುವ ಮೂಲಕ ಪ್ರಾಣಿ ಪ್ರಿಯರಾಗುವಂತೆ ಕರೆ ನೀಡಿದರು.
Advertisement
Advertisement
ವನ್ಯ ಜೀವಿಗಳ ಸಂತತಿ ದಿನೇ ದಿನೇ ನಶಿಸುತ್ತಿದೆ. ಡೈನೋಸಾರ್ ಗಳು ಇದ್ದ ಬಗ್ಗೆ ನಾವೀಗ ಅಂತೆ ಕಂತೆಗಳನ್ನು ಕೇಳುತ್ತಿದ್ದೇವೆ. ಮುಂದಿನ ಕನಿಷ್ಠ 50 ವರ್ಷಗಳಲ್ಲಿ ಹುಲಿ, ಸಿಂಹ ಇತ್ತಂತೆ ಎಂದು ಹೇಳುವ ಪರಿಸ್ಥಿತಿ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
Advertisement
ಕಾರ್ಯಕ್ರಮದ ನಂತರ ನಟ ದರ್ಶನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದು ಪೈಪೋಟಿ ನಡೆಸಿದರು. ಅಭಿಮಾನಿಗಳಿಗೆ ನಿರಾಸೆ ಮಾಡದೇ ನಗು ಮೊಗದೊಂದಲೇ ಸೆಲ್ಫಿಗೆ ನಟ ದರ್ಶನ್ ಪೋಸ್ ಕೊಟ್ಟರು.