ಡಿಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಕೂಡ ಸಕ್ಸಸ್ ಮೀಟ್ ಸಂಭ್ರಮವನ್ನು ಆಚರಿಸಿದೆ. ಈ ವೇಳೆ, ಮಾಧ್ಯಮಕ್ಕೆ ದರ್ಶನ್ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾ ಸಕ್ಸಸ್ ಕಂಡಿರೋ ಬೆನ್ನಲ್ಲೇ ಮಾಧ್ಯಮದ ಜೊತೆ ದರ್ಶನ್ ಮಾತನಾಡಿದ್ದಾರೆ. ಜಾತಿ ಒಳಗೊಂಡಂತೆ ಸಿನಿಮಾದ ಒಳಗೆ ಮತ್ತಷ್ಟು ಭಿನ್ನ ಕಥೆ ಇದೆ. ಕಥೆ ಸೆಲೆಕ್ಷನ್ ಹೇಗೆ ಮಾಡಿದ್ರಿ ಎಂದು ದರ್ಶನ್‌ಗೆ (Darshan) ಕೇಳಲಾಯಿತು.
‘ಕಾಟೇರ’ (Katera Film) ಕಥೆ ಕೇಳುವಾಗ ಚಂದಮಾಮನ ಕಥೆ ಕೇಳಿದಂತೆ ಕೇಳಿದ್ದೀನಿ. ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಇವತ್ತು ಜನ ಮಾತನಾಡೋದೇನು? ಗಂಡಸು ಬೆವರು ಸುರಿಸಬೇಕು. ಜೊಲ್ಲು ಸುರಿಸಬಾರದು ಅಂತಾರೆ. ಇದರಲ್ಲಿ ಅದೆಷ್ಟು ಅರ್ಥ ಇದೆ. ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಕಥೆನೇ ಇದು ಎಂದು ದರ್ಶನ್ ಮಾತನಾಡಿದ್ದಾರೆ.
ಕಥೆ ಕೇಳುವಾಗ ನಟನೆಗೆ ಜಾಗ ಇದೆ ಅನಿಸ್ತು. ಖುಷಿ ಆಗುತ್ತದೆ. ನಾನು ಸಿನಿಮಾ ಕಥೆ ಆಯ್ಕೆ ಮಾಡುವಾಗ ಮೂರು ರೀತಿ ಯೋಚನೆ ಮಾಡುತ್ತೇನೆ. ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು. ಕನ್ನಡ ಭಾಷೆಗೆ ಅವಮಾನವಾಗುವಂತೆ ಇರಬಾರದು. ಅನ್ನದಾತರಿಗೆ ನಷ್ಟ ಆಗಬಾರದು ಎಂದು ದರ್ಶನ್ ಮಾತನಾಡಿದ್ದಾರೆ.
ಬಳಿಕ ನಾನು ಯಾವತ್ತಿಗೂ ರಾಷ್ಟ್ರ ಪ್ರಶಸ್ತಿ ಬರೋಕೆ ಅಂತ ಸಿನಿಮಾ ಮಾಡಲ್ಲ. ಹಾಗಿದ್ರೆ ಆರ್ಟ್ ಮೂವಿನೇ ಮಾಡುತ್ತಿದ್ದೆ ಎಂದು ಡಿಬಾಸ್ ‘ಕಾಟೇರ’ ಸಕ್ಸಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:ನಟ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿದ್ಧತೆ
ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ (Katera Film) ಸಿನಿಮಾದಲ್ಲಿ ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ (Aradhana Ram) ದರ್ಶನ್‌ಗೆ ನಾಯಕಿಯಾಗಿ ನಟಿಸಿದ್ದಾರೆ.