ಬೆಂಗಳೂರು: ನೆಚ್ಚಿನ ನಟರನ್ನ ದೇವರೆಂದೇ ನಂಬುವ ಎಷ್ಟೋ ಅಭಿಮಾನಿಗಳಿದ್ದಾರೆ. ಇಂಥದ್ದೊಂದು ಘಟನೆ ಇದೀಗ ನಡೆದಿದೆ.
ದರ್ಶನ್ ಪುಟ್ಟ ಅಭಿಮಾನಿ ಸಾವಿನ ಕೊನೆ ಘಳಿಗೆಯಲ್ಲಿದ್ದಾಗಲೂ ನಟರನ್ನ ನೋಡೋದಕ್ಕೆ ತವಕಿಸುತ್ತಿದ್ದರು. ಇದೀಗ ಆ ಬಾಲೆಯ ಆಸೆ ಪೂರೈಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.
ದರ್ಶನ್ ಅವರ ಕಟ್ಟಾ ಅಭಿಮಾನಿ 11 ವರ್ಷದ ಪೂರ್ವಿಕಾ ಕಳೆದೆರೆಡು ವರ್ಷದಿಂದ ಹಾರ್ಟ್ ಪ್ರಾಬ್ಲಮ್‍ನಿಂದಾಗಿ ಬಳಲುತ್ತಿದ್ದು, ಹೊಟ್ಟೆಯಲ್ಲಿ ನೀರು ತುಂಬಿದೆ. ಈ ಕಾರಣ ಆಕೆ ಬದುಕೋದು ಕಷ್ಟ ಎಂದು ವೈದ್ಯರು ಹೇಳುತ್ತಿದ್ದಂತೆಯೇ ಆಕೆಯ ಕೊನೆಯ ಆಸೆಯ ಪ್ರಕಾರ ತನ್ನ ನೆಚ್ಚಿನ ನಟ ದರ್ಶನ್‍ರನ್ನ ಮೀಟ್ ಮಾಡಿದ್ದಾರೆ.
ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ದರ್ಶನ್ ಅವರು ತಮ್ಮ ಪುಟ್ಟ ಅಭಿಮಾನಿಯನ್ನು ಸೆಟ್‍ಗೆ ಕರೆಸಿಕೊಂಡು ಪಕ್ಕದಲ್ಲಿ ಕೂರಿಸಿಕೊಂಡು ಧೈರ್ಯತುಂಬಿ ಕಳಿಸಿದ್ದಾರೆ.
ಸದ್ಯ ಮಂಡ್ಯ ಮೂಲದ ಪೂರ್ವಿಕಾ ಕಳೆದ ಹಲವು ತಿಂಗಳಿಂದ ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.