ಬೆಂಗಳೂರು: ನಟ ದರ್ಶನ್ ಅವರು ನಾಯಕ ನಟನಾಗಿ 15 ವರ್ಷಗಳೇ ಕಳೆದಿವೆ. ಇವರ ಮೆಜೆಸ್ಟಿಕ್ ಚಿತ್ರಕ್ಕೆ 15 ವರ್ಷ ತುಂಬಿದೆ. ಆದ್ರೆ ಇದೇ ಸಂದರ್ಭದಲ್ಲಿ ಸುದೀಪ್- ದರ್ಶನ್ ಮಧ್ಯೆ ಟ್ವಿಟ್ಟರ್ ವಾದ ನಡೆದಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ.
Advertisement
ಹೌದು. 2002 ಫೆಬ್ರವರಿ 08ರಲ್ಲಿ ದರ್ಶನ್ ಅಭಿನಯದ ಮೆಜೆಸ್ಟಿಕ್ ಚಿತ್ರ ಸೂಪರ್ ಹಿಟ್ ಆಗಿತ್ತು. ಅದಾಗಲೇ ಚಿಗುರು ಮೀಸೆಯ ದರ್ಶನ್ ಕಟೌಟ್‍ಗಳು ಎಲ್ಲೆಡೆ ರಾರಾಜಿಸುತ್ತಿತ್ತು. ಆದ್ರೆ ಈ ಯುವಕ ಮುಂದೆ ಕನ್ನಡದ ಸೂಪರ್ ಸ್ಟಾರ್ ಆಗ್ತಾರೆ ಅಂತ ಯಾರೂ ಊಹೆ ಮಾಡಿರಲಿಲ್ಲ.
Advertisement
Advertisement
ಆ ಎಲ್ಲಾ ಊಹೆಗಳಿಗೆ ಬ್ರೇಕ್ ಹಾಕುವಂತೆ ಇಂದು ಕನ್ನಡ ಚಿತ್ರರಂಗದಲ್ಲೇ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿದ್ದಾರೆ ಎಂದರೆ ಅದು ನಿಜಕ್ಕೂ ಹೆಮ್ಮೆಯ ವಿಷಯ. ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕ ನಟನಾಗಿ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದು, ಸ್ಯಾಂಡಲ್‍ವುಡ್‍ನಲ್ಲಿ ದರ್ಶನ್ ಹೀರೋಯಿಸಂ ಶುರುವಾಗಿ 15 ವರ್ಷಗಳು ಆಗಿವೆ.
Advertisement
`ಮೆಜೆಸ್ಟಿಕ್’ ಸಿನಿಮಾ 2002ರ ಫೆಬ್ರವರಿ 08 ರಂದು ಬಿಡುಗಡೆಯಾಗಿತ್ತು. ನಿರ್ದೇಶಕ ಪಿ.ಎನ್.ಸತ್ಯ ನಿರ್ದೇಶಿಸಿದ ಈ ಚಿತ್ರಕ್ಕೆ ಎಂ.ಜಿ.ರಾಮಮೂರ್ತಿ ಮತ್ತು ಭಾ.ಮಾ ಹರೀಶ್ ನಿರ್ಮಾಣ ಮಾಡಿದ್ದರು. ಸಾಧುಕೋಕಿಲಾ ಸಂಗೀತ ನೀಡಿದ್ದರು. ಅಣಜಿ ನಾಗರಾಜ್ ಅವರ ಛಾಯಗ್ರಹಣವಿತ್ತು. ಇನ್ನು ಚಿತ್ರದಲ್ಲಿ `ಸ್ವರ್ಶಾ’ ರೇಖಾ ನಾಯಕಿಯಾಗಿದ್ದರು. ಸುದೀಪ್ ಅವರ ಮೊದಲ ಸಿನಿಮಾದಲ್ಲಿ ನಾಯಕಿಯಾಗಿದ್ದ ರೇಖಾ, ದರ್ಶನ್ ಅವರ ಮೊದಲ ಚಿತ್ರಕ್ಕೂ ಹೀರೋಯಿನ್ ಆಗಿದ್ದರು ಎಂಬುವುದನ್ನ ಇಲ್ಲಿ ಸ್ಮರಿಸಬಹುದು.
ಮೆಜೆಸ್ಟಿಕ್ ಸಿನಿಮಾ ತೆರೆ ಕಾಣುವುದಕ್ಕಿಂತ ಮೊದಲು ದರ್ಶನ್ ಸುಮಾರು 6-7 ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸಿದ್ದರು. ಆದ್ರೆ `ಮೆಜೆಸ್ಟಿಕ್’ ಸಿನಿಮಾದಲ್ಲಿ ನಟಿಸಿದ ಬಳಿಕ ದರ್ಶನ್ ಜೀವನವೇ ಬದಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಿದ್ದಾರೆ.
`ಮೆಜೆಸ್ಟಿಕ್’ ಚಿತ್ರದಲ್ಲಿ ದರ್ಶನ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದರು. ಒಂದು ಕಡೆ ‘ದಾಸ’ ಎಂಬ ರೌಡಿ ಪಾತ್ರವಾದರೇ, ಮತ್ತೊಂದೆಡೆ ಪ್ರಜ್ವಲ್ ಎಂಬ ಲವರ್ ಬಾಯ್ ಕ್ಯಾರೆಕ್ಟರ್. ಆದ್ರೆ ದಾಸನ ಗೆಟಪ್‍ನಲ್ಲಿ ದರ್ಶನ್ ಅಬ್ಬರಿಸಿದ್ದರು. ಮುಂದೆ ‘ದಾಸ’ ಎಂಬ ಹೆಸರಿನಲ್ಲೇ ಸಿನಿಮಾ ಕೂಡ ಮಾಡಿದರು. ಈಗಲೂ ಚಾಲೆಂಜಿಂಗ್ ಸ್ಟಾರ್ ‘ದಾಸ ದರ್ಶನ್’ ಎಂದೇ ಗುರುತಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!
ಇದನ್ನೂ ಓದಿ: ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?
ಇದನ್ನೂ ಓದಿ: ದರ್ಶನ್-ಸುದೀಪ್ ವೈಮನಸ್ಸು ಹಿಂದೆ ದೊಡ್ಡ ಕಥೆಯಿದೆ-ಬುಲೆಟ್ ಪ್ರಕಾಶ್
ಇದನ್ನೂ ಓದಿ: ಇಷ್ಟೆಲ್ಲಾ ಟ್ವೀಟ್ ಮಾಡಿದ್ದು ನಾನೇ, ಖಾತೆ ಹ್ಯಾಕ್ ಆಗಿಲ್ಲ: ದರ್ಶನ್