ಬೆಂಗಳೂರು: ‘ಯಜಮಾನ’ ಚಿತ್ರದ ಚಿತ್ರೀಕರಣದ ವೇಳೆ ಚಾಲೆಜಿಂಗ್ ಸ್ಟಾರ್ ದರ್ಶನ್ ಜೂನಿಯರ್ ಕಲಾವಿದನ ಮೇಲೆ ಹಲ್ಲೆ ನಡೆಸಿಲ್ಲ ಎಂದು ನಿರ್ಮಾಪಕಿ ಶೈಲಜಾ ನಾಗ್ ಹೇಳಿದ್ದಾರೆ.
ಯಜಮಾನ ಸಿನಿಮಾ ಚಿತ್ರೀಕರಣದ ವೇಳೆ ಸಹ ಕಲಾವಿದ ಶಿವಶಂಕರ್ ಎಂಬವರು ಮೊಬೈಲ್‍ನಲ್ಲಿ ಸೆರೆಹಿಡಿಯುತ್ತಿದ್ದರು. ಈ ವೇಳೆ ಚಿತ್ರತಂಡ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಶೂಟಿಂಗ್ ರೆಕಾರ್ಡ್ ಮಾಡಿದ್ದಕ್ಕೆ ದರ್ಶನ್ ಹೊಡೆದಿದ್ದಾರೆ ಎನ್ನುವ ವಿಚಾರಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಖಾಸಗಿ ಸ್ಟುಡಿಯೋವೊಂದರಲ್ಲಿ ಹಾಡಿನ ಚಿತ್ರೀಕರಣವೊಂದು ಮಾಡುತ್ತಿದ್ದೇವು. ಈ ಚಿತ್ರದ ಹಾಡಿಗಾಗಿ 450ಕ್ಕೂ ಹೆಚ್ಚು ನೃತ್ಯಗಾರರು ಹಾಗೂ ಸಹ ಕಲಾವಿದರು ಬಂದಿದ್ದಾರೆ. ಅದರಲ್ಲಿ ಒಬ್ಬ ಸಹ ಕಲಾವಿದ ಬೆಳಗ್ಗೆಯಿಂದ ಎರಡು ಬಾರಿ ಮೊಬೈಲ್‍ನಲ್ಲಿ ಚಿತ್ರೀಕರಣವನ್ನು ಸೆರೆಹಿಡಿದಿದ್ದ. ಹೀಗೆ ಸಹ ಕಲಾವಿದ ಮೊಬೈಲಿನಲ್ಲಿ ಚಿತ್ರೀಕರಿಸುವಾಗ ಚಿತ್ರತಂಡದಲ್ಲಿ ಆತನನ್ನು ಎಚ್ಚರಿಸಿದ್ದರು. ಈ ರೀತಿ ಮಾಡಬೇಡ ನಿನ್ನನ್ನು ಹಣ ನೀಡಿ ಅಭಿನಯಕ್ಕೆ ಕರೆಸಿಕೊಂಡಿದ್ದೇವೆ. ನೀನು ಈ ರೀತಿ ಮಾಡಬೇಡ ಎಂದು ಹೇಳಿದರೂ ಆತ ಪದೇ ಪದೇ ಈ ರೀತಿ ಮಾಡುತ್ತಿದ್ದನು ಎಂದು ವಿವರಿಸಿದರು.
Advertisement
Advertisement
ಆ ಸಹ ಕಲಾವಿದನನ್ನು ಪದೇ ಪದೇ ಎಚ್ಚರಿಸಿದ್ದರೂ ಈ ರೀತಿ ಮಾಡಿದ್ದನ್ನು ನೋಡಿ ಗಂಭೀರವಾಗಿ ಆತನನ್ನು ಎಚ್ಚರಿಸಿದ್ದೇವು. ನಮ್ಮ ತಂಡದಲ್ಲಿ ಯಾರೇ ಇರಲಿ ನಾವು ಅವರನ್ನು ಮೊಬೈಲಿನಲ್ಲಿ ಚಿತ್ರೀಕರಿಸಬೇಡಿ ಎಂದು ಎಚ್ಚರಿಸುತ್ತೇವೆ. ಚಿತ್ರಮಂದಿರದಲ್ಲಿ ತೋರಿಸುವ ಸಲುವಾಗಿ ನಾವು ಹಾಡನ್ನು ಚಿತ್ರೀಕರಿಸುತ್ತಿದ್ದೇವೆ. ಆದರೆ ಸಹ ಕಲಾವಿದ ಈ ರೀತಿ ಮಾಡುವುದರಿಂದ ಎಲ್ಲರೂ ತಮ್ಮ ಮೊಬೈಲಿನಲ್ಲೇ ಹಾಡನ್ನು ನೋಡಿದರೆ, ನಾವು ಚಿತ್ರೀಕರಣ ಮಾಡುವುದು ಯಾವುದೇ ಉಪಯೋಗವಿರುದಿಲ್ಲ. ಹಾಗಾಗಿ ನಾವು ಅದನ್ನು ವಿರೋಧಿಸಿದ್ದೇವು. ಆತನನ್ನು ತಡೆದದ್ದೇ ತಪ್ಪು ಎಂದರೆ ಅದೇ ತಪ್ಪಾಗುತ್ತದೆ ಎಂದು ತಿಳಿಸಿದರು.
Advertisement
Advertisement
ನಮ್ಮ ಚಿತ್ರತಂಡದಲ್ಲಿರುವ ಎಲ್ಲರೂ ಆತನನ್ನು ಎಚ್ಚರಿಸಿದ್ದರು. ಸ್ಟುಡಿಯೋಗೆ ಬಾಡಿಗೆ ಕಟ್ಟಿ, ಸೆಟ್ ಹಾಕಿ ಹಾಡಿನ ಚಿತ್ರೀಕರಣ ಮಾಡುವಾಗ ಆತ ನಮ್ಮದೇ ಚಿತ್ರವನ್ನು ಚಿತ್ರೀಕರಣ ಮಾಡಿದರೆ ನಾವು ಅದನ್ನು ಪ್ರಶ್ನಿಸಲೇ ಬೇಕಾಗುತ್ತದೆ. ಹಾಗಾಗಿ ಚಿತ್ರತಂಡದಲ್ಲಿರುವವರು ಎಲ್ಲರೂ ಆತನನ್ನು ಪ್ರಶ್ನಿಸಿದ್ದಾರೆ. ಸದ್ಯ ಈಗ ಯಾವುದೇ ಸಮಸ್ಯೆಯಿಲ್ಲದೇ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ದರ್ಶನ್ ಅವರೇ ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ದರ್ಶನ್ ಆ ಸಹ ಕಲಾವಿದನನ್ನು, “ಅಪ್ಪ, ನೀನು ಮೊಬೈಲ್ ಇಳಿಸು. ಎಲ್ಲರು ಬೆಳಗ್ಗೆಯಿಂದಲೂ ಎರಡು ಬಾರಿ ನಿನ್ನನ್ನು ಎಚ್ಚರಿಸುತ್ತಿದ್ದಾರೆ. ಈ ರೀತಿ ಮಾಡಬೇಡ” ಎಂದು ದರ್ಶನ್ ಹೇಳಿದರೆ ಹೊರತು ಆತನ ಮೇಲೆ ಹಲ್ಲೆ ಮಾಡಿಲ್ಲ ಎಂದು ಯಜಮಾನ ನಿರ್ಮಾಪಕಿ ಹಲ್ಲೆ ನಡೆದಿದೆ ಎನ್ನಲಾದ ಸುದ್ದಿಗೆ ಸ್ಪಷ್ಟನೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv