ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪರ ಚಾಮುಂಡೇಶ್ವರಿಯಲ್ಲಿ ಪ್ರಚಾರ ನಡೆಸಿರುವ ನಟ ದರ್ಶನ್ ಪ್ರಚಾರದ ವೇಳೆ ಸಿಎಂ ಪುತ್ರ ರಾಕೇಶ್ ರನ್ನು ನೆನೆದು, ಮಗ ಮೃತಪಟ್ಟರು ಕುಗ್ಗದೆ ಸಿಎಂ ಜನರಿಗಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕ್ಷೇತ್ರದ ಹಳ್ಳಿಗಳಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ದರ್ಶನ್, ರಾಕೇಶ್ ಸಾವನ್ನಪ್ಪಿದ ವೇಲೆ ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿದೆ. ಬಳಿಕ 10-15 ದಿನಗಳಲ್ಲೇ ಮಗನ ಸಾವಿನಿಂದ ಕುಗ್ಗದೆ ಎದ್ದು ಬಂದರು. ಅಲ್ಲದೇ ಜನರು ತನ್ನನ್ನು ಗೆಲ್ಲಿಸಿದ್ದಾರೆ ಅವರ ಪರ ಕೆಲಸ ಮಾಡಬೇಕು ಎಂದು ಹೇಳಿದ್ದರು. ಮನುಷ್ಯನಿಗೆ ಕಷ್ಟ ಬರುತ್ತೆ ಆದರೆ ಅದನ್ನು ಎದುರಿಸಬೇಕು. ಅದ್ದರಿಂದ ಈ ಬಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಬೇಕು. ಸಿದ್ದರಾಮಯ್ಯ ಅವರನ್ನು ನಂಬಿ. ಅವರನ್ನು ಗೆಲ್ಲಿಸಿಕೊಟ್ಟ ಜನರ ಪರ ಅವರು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಡೇರ್ ಅಂಡ್ ಡೆವಿಲ್. ಹೀಗಾಗಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
Advertisement
Advertisement
ಯತೀಂದ್ರ ಸಾಥ್: ಚಾಮುಂಡೇಶ್ವರಿಯಲ್ಲಿ ತಂದೆ ಪರ ಪ್ರಚಾರ ನಡೆಸುತ್ತಿರುವ ದರ್ಶನ್ ಅವರಿಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಸಾಥ್ ನೀಡಿದ್ರು. ಅಲ್ಲದೇ ಕಾಂಗ್ರೆಸ್ ಮುಖಂಡರಾದ ಧ್ರುವಕುಮಾರ್, ಶಿವಣ್ಣ, ರಾಕೇಶ್ ಪಾಪಾಣ್ಣ ಕೂಡ ಪ್ರಚಾರದಲ್ಲಿ ಭಾಗವಹಿಸಿದ್ದರು. ದರ್ಶನ್ ಪ್ರಚಾರ ನಡೆಸುತ್ತಿರುವ ನೋಡಲು ಹಲವು ಅಭಿಮಾನಿಗಳು ಆಗಮಿಸಿದ್ರು. ಪ್ರಚಾರ ನಡೆಸಿದ ಎಲ್ಲಾ ಗ್ರಾಮಗಳಲ್ಲಿ ಮಾತನಾಡಿದ ದರ್ಶನ್, ಸಿಎಂ ಪರ ಪ್ರಚಾರ ಮಾಡುತ್ತಿರುವುದು ಒಳ್ಳೆಯದು ಅಲ್ಲವೇ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
Advertisement
Advertisement
ಜೆಡಿಎಸ್ ಪ್ರತಿಭಟನೆ: ಪ್ರಚಾರಕ್ಕೂ ಮೊದಲು ನಟ ದರ್ಶನ್ ಅವರನ್ನು ಗ್ರಾಮಕ್ಕೆ ಪ್ರವೇಶ ಮಾಡದಂತೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಚಾಮುಂಡೇಶ್ವರಿಯ ನಾಗನಹಳ್ಳಿಯಲ್ಲಿ ದರ್ಶನ್ ಗ್ರಾಮಕ್ಕೆ ಅಗಮಿಸದಂತೆ ಘೋಷಣೆ ಕೂಗಿದ್ದರು. ಅಲ್ಲದೆ ಯಾವುದೇ ಕಾರಣಕ್ಕೂ ದರ್ಶನ ಗ್ರಾಮಕ್ಕೆ ಆಗಮಿಸಬಾರದು ಎಂದು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಸಿಎಂ ಕಳೆದ 12 ವರ್ಷಗಳಿಂದ ತಮ್ಮ ಕ್ಷೇತ್ರವನ್ನು ಮರೆತಿದ್ದಾರೆ. ಅಲ್ಲದೇ ಅವರ ಅಧಿಕಾರ ಅವಧಿಯಲ್ಲಿ ರೈತಪರ ಕೆಲಸ ಮಾಡಿಲ್ಲ. ಅಣ್ಣ ಅಂಬರೀಶ್ ಅವರನ್ನು ಕಾಂಗ್ರೆಶ್ ಪಕ್ಷದಿಂದ ದೂರ ಮಾಡಿದ್ದಾರೆ. ಅದ್ದರಿಂದ ಯಾವುದೇ ಕಾರಣಕ್ಕೂ ಪ್ರಚಾರ ಮಾಡಬಾರದು. ಎಂದು ರೈತ ವಿರೋಧಿ ದರ್ಶನ್ ಎಂದು ಘೋಷಣೆ ಕೂಗಿದ್ದರು.