ಬೆಂಗಳೂರು: ನಟ ದರ್ಶನ್ ಅವರ ಅಪಘಾತಕ್ಕೀಡಾದ ಕಾರಿನ ಬಗ್ಗೆ ಸ್ಫೋಟಕ ಸುದ್ದಿಯೊಂದು ಲಭ್ಯವಾಗಿದ್ದು, ಕಾರನ್ನು ಅಪಘಾತದ ನಂತರ ಬೆಂಗಳೂರಿಗೆ ರವಾನಿಸಲಾಗಿದೆ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಇಂದು ಮುಂಜಾನೆ ಮೈಸೂರಿನ ಹಿನಕಲ್ ಬಳಿ ದರ್ಶನ್ ಕಾರು ಅಪಘಾತವಾಗಿತ್ತು. ಆದರೆ ಈ ಬಗ್ಗೆ ಯಾವುದೇ ರೀತಿಯ ದೂರು ದಾಖಲಾಗಿರಲಿಲ್ಲ. ಬಳಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪೊಲೀಸರು ಆಸ್ಪತ್ರೆಯ ಬಳಿ ಬಂದು ವಿಚಾರಣೆ ಮಾಡಿದ್ದರು. ಈಗ ಪೊಲೀಸರಿಂದಲೇ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಆಂಟೋನಿ ರಾಯ್
ಅಪಘಾತದ ಬಳಿಕ ಕಾರನ್ನು ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಯಾಕೆ ಕಾರನ್ನು ಬೆಂಗಳೂರಿಗೆ ಕಳುಹಿಸಿದ್ರು ಹಾಗೂ ವಾಹನ ಯಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿಲ್ಲ. ಆದರೆ ಆಂಟೋನಿ ರಾಯ್ ಕಾರು ಚಲಾಯಿಸುತ್ತಿದ್ದರು ಅಂತ ದರ್ಶನ್ ಸ್ನೇಹಿತರು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯಕ್ಕೆ ನಾವು ಸುಮೊಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಕಾರನ್ನು ಬೆಂಗಳೂರಿನಿಂದ ವಾಪಸ್ ಮೈಸೂರಿಗೆ ತರುವಂತೆ ಸೂಚನೆ ಕೊಟ್ಟಿದ್ದೇವೆ ಎಂದು ಮೈಸೂರು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ದರ್ಶನ್ ಕಾರು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದು, ಅಪಘಾತ ನಡೆದ ಸ್ಥಳದಲ್ಲಿ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.
ದರ್ಶನ್ ಅವರ ಆರೋಗ್ಯ ಕುರಿತು ಮಾಧ್ಯಮಗಳಿಗೆ ಪತ್ನಿ ವಿಜಯಲಕ್ಷ್ಮಿ ಅವರು ಪ್ರತಿಕ್ರಿಯಿಸಿ, ಅವರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಸದ್ಯ ಅವರಿಗೆ ಏನೂ ಆಗಿಲ್ಲ, ಅವರು ಕ್ಷೇಮವಾಗಿದ್ದಾರೆ. ಅಭಿಮಾನಿಗಳು ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ದರ್ಶನ್ ಅವರ ಕೈಗೆ ಪೆಟ್ಟಾಗಿ ಮೂಳೆಗೆ ಏಟಾಗಿದೆ. ಸ್ವಲ್ಪ ವಿಶ್ರಾಂತಿ ಪಡೆದರೆ ಅವರು ಬೇಗ ಗುಣವಾಗುತ್ತಾರೆ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=1Og1WofmDjE