ದುರ್ಗಾ, ಸೀತಾ ವಲ್ಲಭ, ಸೀರಿಯಲ್ ಮೂಲಕ ಮೋಡಿ ಮಾಡಿದ್ದ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಸೀಸನ್ 9 (Bigg Boss Season 9) ಕ್ಕೆ ಕಾಲಿಟ್ಟಿದ್ದರು. ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದ ದರ್ಶ್ ಇದೀಗ ಮೂರನೇ ವಾರಕ್ಕೆ ದೊಡ್ಮನೆಯಿಂದ ಹೊರ ನಡೆದಿದ್ದಾರೆ.
ನಟನೆಯ ಜೊತೆಗೆ ಉದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ದರ್ಶ್ ಚಂದ್ರಪ್ಪ (Darsh Chandrappa) ಬಿಗ್ ಬಾಸ್ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿದ್ದರು. ತಮ್ಮ ಖಡಕ್ ಮಾತಿನ ಮೂಲಕ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದು ಕೂಡ ಇದೆ. ಚಿನ್ನದ ಗಣಿ ಟಾಸ್ಕ್ನಲ್ಲಿ ಉತ್ತಮವಾಗಿ ಆಟವಾಡಿ ದರ್ಶ್ ಸೈ ಎನಿಸಿಕೊಂಡಿದ್ದರು. ಆದರೆ ಇದೀಗ ಪ್ರೇಕ್ಷಕರ ವೋಟ್ ದರ್ಶ್ ಕೈಹಿಡಿಯಲಿಲ್ಲ. ಬಿಗ್ ಬಾಸ್ ನ ಮೂರನೇ ವಾರದ ಆಟದಲ್ಲಿ ದರ್ಶ್ ಎಲಿಮಿನೇಟ್ ಆಗಿದ್ದಾರೆ.
ಮೊದಲ ವಾರ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದಿವ್ಯಾ ಉರುಡುಗ (Divya Uruduga) ಅವರ ಪರ ನಿಂತು ದರ್ಶ್ ಅವರು ಸಂಬರ್ಗಿಗೆ (Prashanth Sambargi) ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ದರ್ಶ್ ಅವರ ಈ ಮಾತುಗಳು ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗಿತ್ತು. ಐಶ್ವರ್ಯಾ ಪಿಸ್ಸೆ, ನವಾಜ್ ನಂತರ ಇದೀಗ ದರ್ಶ್ ಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗಿದೆ.
ಪ್ರತಿಭಾವಂತ ನಟ ದರ್ಶ್ಗೆ, ಬಿಗ್ ಬಾಸ್ ನಂತರ ಒಂದೊಳ್ಳೆ ಅವಕಾಶಗಳು ಸಿಗಲಿ, ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಲಿ ಎಂಬುದೇ ಅಭಿಮಾನಿಗಳ ಆಶಯ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ