ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಚಂದನವನದ ಸಕ್ಸಸ್‌ಫುಲ್ ನಿರ್ದೇಶಕ ಶಶಾಂಕ್ ಜೊತೆ ಮುಂದಿನ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ.
`ಲವ್ ಮಾಕ್ಟೇಲ್ 2′ ಸಕ್ಸಸ್ ನಂತರ ಹೊಸ ಬಗೆಯ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಳ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರೋ ನಟ ಕೃಷ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮದ ಮಧ್ಯೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಕ್ಸಸ್‌ಫುಲ್ ಸಿನಿಮಾಗಳನ್ನ ನೀಡಿರೋ ಶಶಾಂಕ್ ನಿರ್ದೇಶನದಲ್ಲಿ ನಟಿಸಲು ಕೃಷ್ಣ ಸಾಥ್ ನೀಡಿದ್ದಾರೆ. ನಟನ ಬರ್ತಡೇ ಪ್ರಯುಕ್ತ ನಿರ್ದೇಶಕ ಶಶಾಂಕ್ ಕೂಡ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ಅಂತಾ ಸೂಪರ್ ಹಿಟ್ ಚಿತ್ರಗಳನ್ನ ನೀಡಿರೋ ನಿರ್ದೇಶಕ ಶಶಾಂಕ್ ಜೊತೆ ಡಾರ್ಲಿಂಗ್ ಕೃಷ್ಣ ಕೈ ಜೋಡಿಸಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಶಶಾಂಕ್ `ಟೇಲ್ ಆಫ್ ರಿಯಲ್ ಮ್ಯಾನ್’ ಎಂಬ ಕ್ಯಾಪ್ಷನ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಸದ್ಯಕ್ಕೆ ಪಾತ್ರ ವರ್ಗದ ಆಯ್ಕೆಯ ಜೊತೆ ಚಿತ್ರದ ಟೈಟಲ್ ಅನೌನ್ಸ್ ಆಗಬೇಕಿದೆ. ಜುಲೈ ಅಂತ್ಯದಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ: ಯಶ್ ಮುಂದಿನ ಸಿನಿಮಾಗೆ ಕರಾವಳಿ ಸುಂದರಿ ಜೋಡಿ
View this post on Instagram
ಸದ್ಯ ಈ ಚಿತ್ರದ ಲುಕ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಇದೊಂದು ಮ್ಯೂಸಿಕಲ್ ಸ್ಟೋರಿಯಾಗಿದ್ದು, ಎಂದೂ ಮಾಡಿರದ ವಿಭಿನ್ನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಳ್ತಿದ್ದಾರೆ. ನಿರ್ಮಾಣದ ಜೊತೆ ನಿರ್ದೇಶನದ ಹೊಣೆ ಹೊತ್ತಿರುವ ಶಶಾಂಕ್, ಡಾರ್ಲಿಂಗ್ ಕೃಷ್ಣ ಜೊತೆಗಿನ ಚಿತ್ರ ಯಾವ ರೀತಿ ಮೋಡಿ ಮಾಡಲಿದೆ ಎಂದು ಕಾದು ನೋಡಬೇಕಿದೆ.