ನವದೆಹಲಿ: ಲೋಕಸಭಾ ಕಲಾಪದಲ್ಲಿ ಭಾಗಿಯಾಗಿದ್ದ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಡ್ಯಾನಿಶ್ ಅಲಿ ಸೋಮವಾರ ಸಂಸತ್ತಿನ ಕಲಾಪದಲ್ಲಿ ಭಾಗಿಯಾಗಿದ್ದರು. ಮಂಗಳವಾರ ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದಾರೆ. ಡಿಸೆಂಬರ್ 23ಕ್ಕೆ ಸಂಸತ್ತಿನ ಚಳಿಗಾಲ ಅಧಿವೇಶನ ಅಂತ್ಯವಾಗುತ್ತಿದೆ. ಕಲಾಪಕ್ಕೆ ಹಾಜರಾಗಿದ್ದ ಸಂಸದರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಇದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್
Despite being fully vaccinated, today, I tested positive for #COVID19. Yesterday, I attended Parliament also. I request all those who came in my contact to get tested and isolate themselves. I am having mild symptoms and hope to recover soon. @loksabhaspeaker @LokSabhaSectt
— Kunwar Danish Ali (@KDanishAli) December 21, 2021
ಟ್ವೀಟ್ನಲ್ಲಿ ಏನಿದೆ?: ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದ ಹೊರತಾಗಿ ಸೋಂಕು ದೃಢಪಟ್ಟಿದೆ. ಸೋಮವಾರ ಕಲಾಪದಲ್ಲಿ ಭಾಗಿಯಾಗಿದ್ದೆ. ಹೀಗಾಗಿ ನನ್ನ ಸಂಪರ್ಕಕ್ಕೆ ಬಂದವರು ಎಲ್ಲರೂ ಕ್ವಾರಂಟೈನ್ಗೆ ಒಳಗಾಗಿ ಮತ್ತು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ