ಗದಗ: ಮೊಹರಂ ಹಬ್ಬದಂದು (Muharram Festival) ಹುಲಿ ವೇಷ ತೊಟ್ಟು (Tiger’s Attire Enthralls) ಕುಣಿದು ಹರಕೆ ತೀರಿಸುವ ವಿಶಿಷ್ಠವಾದ ಸಂಪ್ರದಾಯ ಜಿಲ್ಲೆಯ ಗಜೇಂದ್ರಗಡದಲ್ಲಿದೆ.
ಜಿಲ್ಲೆಯ ಅನೇಕ ಕಡೆಗಳಲ್ಲಿ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದೇ ರೀತಿ ಗಜೇಂದ್ರಗಡ (Gajendragarh) ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹುಲಿ ವೇಷ ತೊಟ್ಟು ಮುಸ್ಲಿಂ (Muslims) ಬಾಂಧವರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ AI ಕ್ಯಾಮೆರಾ – ಇಷ್ಟಬಂದಂತೆ ವಾಹನ ಚಲಾಯಿಸಿದ್ರೆ ಬೀಳುತ್ತೆ ದಂಡ
Advertisement
Advertisement
ಮೊಹರಂ ಹಬ್ಬದ ಕತ್ತಲು ರಾತ್ರಿ ದಿನದಂದು ಪಟ್ಟಣದ ತೆಕ್ಕದ ಮೊಲಾಲಿ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋರ್ಪಡೆ ವಾಡೆಯಲ್ಲಿ ಮುಕ್ತಾಯವಾಯಿತು. ಈ ವೇಳೆ ಹರಕೆ ಹೊತ್ತು ನೂರಾರು ಮಕ್ಕಳು, ಯುವಕರು ಹುಲಿ ವೇಷ ಹಾಕಿಕೊಂಡು ಕುಣಿದು ಹರಕೆ ತೀರಿಸಿದರು. ಹುಲಿ ವೇಷ ಕುಣಿತ ನೋಡಲು ಜನ ಸಾಗರವೇ ಸೇರಿತ್ತು. ಹರಕೆ ಹೊತ್ತ ನೂರಾರು ಹುಲಿ ವೇಷಧಾರಿಗಳು ಈ ಮೆರವಣಿಗೆಯಲ್ಲಿ ಭಾಗಿಯಾಗಿದರು.
Advertisement
ನಮಗೆ ಕಷ್ಟಗಳು ಬಂದಾಗ ಬೇಡಿಕೊಂಡು ಹರಕೆ ಹೇಳಿದ್ದೆವು. ಕಷ್ಟಗಳು ದೂರವಾಗಿ ನಮ್ಮ ಬೇಡಿಕೆ, ಇಷ್ಟಾರ್ಥಗಳು ಈಡೇರಿದ್ದರಿಂದ ಪ್ರತಿ ವರ್ಷ ಹುಲಿ ವೇಷ ಹಾಕಿ ಕುಣಿದು ನಮ್ಮ ಹರಕೆ ತೀರಿಸುತ್ತೇವೆ ಎನ್ನುತ್ತಾರೆ ಹುಲಿ ವೇಷಧಾರಿಗಳು. ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಈ ಭಾಗದಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ.
Advertisement
Web Stories