ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿಗೆ ಕುಣಿಯಲಿರುವ ಈ ಯುವತಿ ಯಾರು?

Public TV
2 Min Read
rrr 1

ಸ್ಕರ್ 2023 (Oscars 2023) ಪ್ರಶಸ್ತಿ ಪ್ರದಾನ ಆರಂಭವಾಗಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ತೆಲುಗಿನ ʻಆರ್‌ಆರ್‌ಆರ್ʼ ಚಿತ್ರದ `ನಾಟು ನಾಟು’ (Naatu Naatu Song) ಸಾಂಗ್ ಆಸ್ಕರ್‌ಗೆ ನಾಮಿನೇಟ್ ಆಗಿದ್ದು, ಗೆಲ್ಲುವ ಭರವಸೆ ಕೂಡ ಮೂಡಿಸಿದೆ. ಈ ವೇದಿಕೆಯ ಮೇಲೆ ರಾಹುಲ್ ಸಿಪ್ಲಿಗಂಜ ಮತ್ತು ಕಾಲಭೈರವ ಅವರು ಲೈವ್ ಆಗಿ ಹಾಡಲಿದ್ದಾರೆ. ಅವರ ಹಾಡಿಗೆ ರಾಮ್ ಚರಣ್- ಜ್ಯೂ.ಎನ್‌ಟಿಆರ್ (Jr.Ntr) ಬದಲು ಅಮೆರಿಕದ ಯುವತಿಯೊಬ್ಬರು ಹೆಜ್ಜೆ ಹಾಕಲಿದ್ದಾರೆ.

rrr 1

ರಾಜಮೌಳಿ (Rajamouli) ನಿರ್ದೇಶನದ `ಆರ್‌ಆರ್‌ಆರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಚಿತ್ರದ ನಾಟು ನಾಟು ಸಾಂಗ್ ಈಗಾಗಲೇ `ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಕೂಡ ಬಾಚಿಕೊಂಡಿದೆ. ಇದೇ ಹಾಡು ಈಗ ಆಸ್ಕರ್ ಅವಾರ್ಡ್‌ಗೆ ನಾಮಿನೇಟ್ ಆಗಿದೆ. ಈ ಹಿಂದೆ ನಾಟು ನಾಟು ಹಾಡಿಗೆ ರಾಮ್‌ಚರಣ್- ಜ್ಯೂ.ಎನ್‌ಟಿಆರ್ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಮಯದ ಅಭಾವದಿಂದ ಕೈಬೀಡಲಾಯಿತು. ಈ ಸುವರ್ಣಾವಕಾಶ ಅಮೆರಿಕದ ನಟಿ ಲಾರೆನ್ ಗೋತ್ಲಿಬ್ ಅವರ  (Lauren Gottileb) ಪಾಲಾಗಿದೆ.

rrr

ಅಮೆರಿಕದ ನಟಿ ಲಾರೆನ್ (Lauren) ಅವರು ಈಗಾಗಲೇ ಹಿಂದಿ ಸಿನಿಮಾ ಮತ್ತು ಕಿರುತೆರೆಯ ಡ್ಯಾನ್ಸ್‌ ಶೋಗಳಲ್ಲಿ ಗುರುತಿಸಿಕೊಂಡಿದ್ದಾರೆ. ಖ್ಯಾತ ನಟ ಪ್ರಭುದೇವ ನಟಿಸಿ, ರೆಮೊ ಡಿಸೋಜಾ ನಿರ್ದೇಶನ ಮಾಡಿದ್ದ `ಎಬಿಸಿಡಿ’ ಸಿನಿಮಾದಲ್ಲಿಯೂ ನಟಿಸಿದರು. ಆ ಬಳಿಕ ಸಾಲು ಸಾಲು ಹಿಂದಿ ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ.

lauren

ತಮಗೆ ನಾಟು-ನಾಟು ಹಾಡಿಗೆ ಆಸ್ಕರ್‌ನಲ್ಲಿ ಡ್ಯಾನ್ಸ್‌ಗೆ ಅವಕಾಶ ದೊರತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದ ಲಾರೆನ್, ವಿಶೇಷ ಸುದ್ದಿ, ನಾನು ಆಸ್ಕರ್‌ನಲ್ಲಿ ನಾಟು-ನಾಟು ಹಾಡಿಗೆ ವಿಶೇಷ ಪ್ರದರ್ಶನ ನೀಡಲಿದ್ದೇನೆ. ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಉತ್ಸುಕಳಾಗಿದ್ದೇನೆ. ನಿಮ್ಮ ಶುಭ ಹಾರೈಕೆಗಳಿರಲಿ ಎಂದು ಬರೆದುಕೊಂಡಿದ್ದರು. ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ನಟಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಬಿದಿರಿನ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಉರ್ಫಿ ಜಾವೇದ್

ʻನಾಟು-ನಾಟುʼ ಹಾಡಿಗೆ ತಾವು ತಮ್ಮ ತಂಡದೊಂದಿಗೆ ತಯಾರಿ ಮಾಡುತ್ತಿರುವ ಕೆಲವು ವಿಡಿಯೋಗಳನ್ನು ಸಹ ಲಾರೆನ್ ಹಂಚಿಕೊಂಡಿದ್ದರು. ಮಾರ್ಚ್ 12 ರಂದು (ಭಾರತದ ಕಾಲಮಾನದಂತೆ ಮಾರ್ಚ್ 13) ಲಾಸ್ ಏಂಜಲಸ್‌ನ ಆಸ್ಕರ್ ಮುಖ್ಯ ವೇದಿಕೆಯಲ್ಲಿ ತಮ್ಮ ತಂಡದೊಂದಿಗೆ ಲಾರೆನ್ ನಾಟು-ನಾಟು ಹಾಡಿಗೆ ಕುಣಿಯಲಿದ್ದಾರೆ.

Share This Article