ಬೆಂಗಳೂರು: ಡ್ಯಾಂ ಮತ್ತು ನದಿಗಳ ಸನಿಹದಲ್ಲಿರುವ ಜನರೆ ಎಚ್ಚರವಾಗಿರಿ. ನಿರಂತರ ಭಾರೀ ಮಳೆಯಿಂದಾಗಿ ಕಾವೇರಿ ನದಿಯ ಹರಿಯುವ ಡ್ಯಾಂಗಳು ಭರ್ತಿಯಾಗಿವೆ. ಶನಿವಾರ ಅಥವಾ ಭಾನುವಾರ ಜಲಾಶಯಗಳ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ.
ಈಗಾಗಲೇ ಕೆಆರ್‌ಎಸ್, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಯಾವುದೇ ಸಮಯದಲ್ಲಿ ಡ್ಯಾಂ ನಿಂದ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದೆ.
Advertisement
ನದಿಪಾತ್ರದಲ್ಲಿ ಪ್ರವಾಹ ಉಂಟಾಗಲಿದ್ದು, ವಿಶೇಷವಾಗಿ ರಾಮನಗರ, ಮಂಡ್ಯ, ಹಾಸನ ಹಾಗೂ ಮೈಸೂರಿನ ಕೆಲ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಜಲ ಆಯೋಗದ ಅಧಿಕೃತ ಪ್ರವಾಹ ಮುನ್ಸೂಚನಾ ಟ್ವಿಟ್ಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ.
Advertisement
With the incoming inflows to the reservoirs KRS and Hemavathy, both reservoirs may get filled up by day after tomorrow i.e. on 15-07-18. Necessary precautions may be taken to avoid downstreaflooding.Releases may be done as per the standard protocols and rule curve.
EE Cauvery Div
— Central Water Commission Official Flood Forecast (@CWCOfficial_FF) July 13, 2018
Advertisement
Advertisement