ಉಡುಪಿ: ದಲಿತ ಸಮುದಾಯಕ್ಕೆ ಸೇರಿದ ಆರಾಧನಾ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಮುಸ್ಲಿಂ ಸಮುದಾಯದವರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ದಲಿತ್ ವರ್ಸಸ್ SDPI ಜಟಾಪಟಿ ನಡೆಯುತ್ತಿದೆ.
Advertisement
ದಲಿತ ಸಮುದಾಯಕ್ಕೆ ಸೇರಿದ ಆರಾಧನಾ ಕ್ಷೇತ್ರವಾದ ಬಬ್ಬುಸ್ವಾಮಿ ಮೂಲ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಸರ್ಕಾರಿ ಸ್ಥಳ ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ನೆಪವೊಡ್ಡಿ ಮುಸ್ಲಿಂ ಸಮುದಾಯದವರು ತಡೆಯೊಡ್ಡಿದ್ದಾರೆ. ಕಂಚಿನಡ್ಕ ಕ್ಷೇತ್ರಕ್ಕೆ ಮೇಲ್ಚಾವಣಿ ಅಳವಡಿಸಲು ವಿರೋಧ ವ್ಯಕ್ತಪಿಸಿದ್ದಾರೆ. ಇದರಿಂದಾಗಿ ನೂರಾರು ದಲಿತ ಕಾರ್ಯಕರ್ತರು ಎಸ್‌ಡಿಪಿಐಗೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ
Advertisement
Advertisement
ತುಳುನಾಡಿನ ಕಾರಣಿಕದ ಬಬ್ಬುಸ್ವಾಮಿ ಕ್ಷೇತ್ರಕ್ಕೆ ಕಬ್ಬಿಣದ ಚಪ್ಪರ ಅಳವಡಿಸಿದರೆ ವಾಹನ ಸಂಚಾರಕ್ಕೆ ತೊಡಕಾಗುತ್ತದೆ ಎಂದು ಮುಸ್ಲಿಂ ಸಮುದಾಯದ ಜನರು ಅಡ್ಡಿಪಡಿಸಿದ್ದಾರೆ. ಇಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಎಸ್‌ಡಿಪಿಐ ಸಂಘಟನೆ ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇದರಿಂದ ಬೇಸತ್ತ ದಲಿತ ಮುಖಂಡರು ಪಕ್ಷದಿಂದ ಹೊರಬಂದಿದ್ದಾರೆ. ಇದನ್ನೂ ಓದಿ: ತಾಯಿ ಹೀರಾಬೆನ್ ಸ್ಕೆಚ್‍ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಮಹಿಳಾ ಅಭಿಮಾನಿ
Advertisement
ಹಿಂದೂ ಸಂಘಟನೆಗಳು ಮೇಲ್ಛಾವಣಿ ಅಳವಡಿಸಲು ಬಿಜೆಪಿ ಅಧಿಕಾರದಲ್ಲಿರುವ ಪಡುಬಿದ್ರಿ ಗ್ರಾಮ ಪಂಚಾಯಿತಿಗೆ ಒಂದು ವಾರದ ಗಡುವು ನೀಡಿವೆ. ಈ ಪ್ರಕರಣವನ್ನು ಇತ್ಯರ್ಥಗೊಳಿಸದೇ ಇದ್ದರೆ ದೊಡ್ಡ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.