ಡೆಹ್ರಾಡೂನ್: ತನ್ನ ಅಳಿಯ ದಲಿತನೆಂಬ ಕಾರಣಕ್ಕೆ ಹುಡುಗಿ ತಾಯಿಯೇ ಅಳಿಯನನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಇಂದು ಉತ್ತರಾಖಂಡದ ಅಲ್ಮೊರಾ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಪನು ಅಧೋಖಾನ್ ರಾಜಕೀಯ ದಲಿತ ಮುಖಂಡ ಜಗದೀಶ್ ಚಂದ್ರ ಅವರಿಂದು ಭಿಕಿಯಾಸೈನ್ ಪಟ್ಟಣದಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಉಪ್ಪಿನ ಉಪವಿಭಾಗದ ತಹಸೀಲ್ದಾರ್ ನಿಶಾ ರಾಣಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಯ್ ಫ್ರೆಂಡ್ ಜೊತೆ ಲಾಡ್ಜ್‌ಗೆ ಹೋಗಿದ್ದ ವಿದ್ಯಾರ್ಥಿನಿ ಹೆಣವಾದ್ಲು – ಕಾರಣ ಮಾತ್ರ ಸಸ್ಪೆನ್ಸ್
Advertisement
Advertisement
ಮೃತದೇಹವನ್ನು ವಿಲೇವಾರಿ ಮಾಡಲು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪತ್ನಿಯ ತಾಯಿ, ಆಕೆಯ ಮಲತಂದೆ ಹಾಗೂ ಮಲ ಸಹೋದರ ಸಿಕ್ಕಿಬಿದ್ದಿದ್ದು, ತಕ್ಷಣವೇ ಬಂಧಿಸಲಾಗಿದೆ.
Advertisement
ಆಗಸ್ಟ್ 21ರಂದು ಜಗದೀಶ್ ಚಂದ್ರ ಅಂತರ್ಜಾತಿ ಮಹಿಳೆಯೊಂದಿಗೆ ವಿವಾಹವಾಗಿದ್ದರು. ತಮಗೆ ಜೀವ ಬೆದರಿಕೆ ಬಂದಿರುವುದಾಗಿ ಆಗಸ್ಟ್ 27ರಂದು ಭದ್ರತೆ ಕೋರಿ, ಆಡಳಿತಕ್ಕೆ ಪತ್ರ ಬರೆದಿದ್ದರು. ಸೂಕ್ತ ವ್ಯವಸ್ಥೆ ಕಲ್ಪಿಸ ಹಿನ್ನೆಲೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ನಿನ್ನೆ ಪತ್ನಿಯ ತಾಯಿಯೇ ಚಂದ್ರನನ್ನು ಅಪಹರಿಸಿ, ಹತ್ಯೆ ಮಾಡಿದ್ದಾರೆ ಎಂದು ತಹಸೀಲ್ದಾರ್ ಹೇಳಿದ್ದಾರೆ. ಇದನ್ನೂ ಓದಿ: 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಪ್ರಾಬ್ಲಂ ಬರೋದು ಸಹಜ: ಡಾ. ರಂಗನಾಥ್
Advertisement
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಉತ್ತರಾಖಂಡ್ ಪರಿವರ್ತನ್ ಪಕ್ಷದ ನಾಯಕ ಪಿ.ಸಿ ತಿವಾರಿ, ಜಗದೀಶ್ ಚಂದ್ರ ಉಪ್ಪಿನ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದರು. ಅವರ ದೂರಿನ ಮೇರೆಗೆ ಭದ್ರತೆ ನೀಡಿದ್ದರೆ ರಕ್ಷಿಸಬಹುದಿತ್ತು. ಈ ಹತ್ಯೆ ಉತ್ತರಾಖಂಡ್‌ಗೆ ನಾಚಿಗೇಡಿನ ಸಂಗತಿಯಾಗಿದೆ. ಮೃತರ ಪತ್ನಿಗೆ 1 ಕೋಟಿ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.