ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಕಾರ್ಡ್ ಮೂಲಕ ಕುಚ್ಚಿಲಕ್ಕಿ ವಿತರಣೆ ಮಾಡುವುದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಘೋಷಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಪಡಿತರ ಕಾರ್ಡ್ ಮೂಲಕ ಬಡವರಿಗೆ ಕುಚ್ಚಿಲಕ್ಕಿ ವಿತರಣೆ ಮಾಡಲು ಕೇಂದ್ರ ಅನುಮತಿ ನೀಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ತಿಂಗಳಿಗೆ 1 ಲಕ್ಷ ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗುತ್ತದೆ. ಇದಕ್ಕೆ ಸಹಕರಿಸಿದ ಸಂಸದರು ಹಾಗೂ ಎರಡು ಜಿಲ್ಲೆಯ ಶಾಸಕರು ಅಭಿನಂದನಾರ್ಹರು. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಹೋರಾಟವನ್ನು ಮಾತುಕತೆಯನ್ನು ಮಾಡಿದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.
Advertisement
Advertisement
ನಾನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಈ ಪ್ರಯತ್ನ ಮಾಡಿದ್ದೆ. ಕುಚ್ಚಿಲಕ್ಕಿ ವಿತರಿಸಲು ಶಿಫಾರಸು ಮಾಡಿದ ಮುಖ್ಯಮಂತ್ರಿ, ಆಹಾರ ಸಚಿವ ಉಮೇಶ್ ಕತ್ತಿ, ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿಗೆ ಧನ್ಯವಾದ ಸಲ್ಲಿಕೆ ಮಾಡುತ್ತೇನೆ. ಎಂ4, ಜಯಾ ತಳಿಯ ಅಕ್ಕಿಯನ್ನು ಖರೀದಿ ಮಾಡಿ ವಿನಿಯೋಗಿಸುತ್ತೇವೆ ಎಂದರು. ಇದನ್ನೂ ಓದಿ: ಕಟೀಲ್, ಸಿದ್ದರಾಮಯ್ಯಗೆ ಕಂಟಕವಾಗ್ತಾರೆ: ಕೋಟ ಶ್ರೀನಿವಾಸ ಪೂಜಾರಿ
Advertisement
Advertisement
ಈಗಾಗಲೇ ಕೆಲವೆಡೆಯಿಂದ ಭತ್ತ ಖರೀದಿಯಾಗಿದೆ. ಖರೀದಿ ಮಾಡಿದ ಭತ್ತವನ್ನು ಮೊದಲು ವಿತರಣೆ ಮಾಡುತ್ತೇವೆ. ಹೊಸ ಖರೀದಿಯ ಸಂದರ್ಭ ಕುಚ್ಚಿಲಕ್ಕಿಯನ್ನು ಖರೀದಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‍ನವ್ರು ರೈಲು, ಬಸ್ ಯಾವುದಲ್ಲಾದ್ರೂ ಹೋಗ್ಲಿ, ಆದ್ರೆ ಸಂದರ್ಭ ನೋಡಿ ಪ್ರತಿಭಟನೆ ಮಾಡ್ಲಿ: ಸುಧಾಕರ್