Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪತ್ರಕರ್ತರ ಗ್ರಾಮವಾಸ್ತವ್ಯಕ್ಕೆ ಮಾಹಿತಿಯೊಂದಿಗೆ ಬನ್ನಿ- ಅಧಿಕಾರಿಗಳಿಗೆ ಯತೀಶ್ ಉಳ್ಳಾಲ್ ಸೂಚನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಪತ್ರಕರ್ತರ ಗ್ರಾಮವಾಸ್ತವ್ಯಕ್ಕೆ ಮಾಹಿತಿಯೊಂದಿಗೆ ಬನ್ನಿ- ಅಧಿಕಾರಿಗಳಿಗೆ ಯತೀಶ್ ಉಳ್ಳಾಲ್ ಸೂಚನೆ

Dakshina Kannada

ಪತ್ರಕರ್ತರ ಗ್ರಾಮವಾಸ್ತವ್ಯಕ್ಕೆ ಮಾಹಿತಿಯೊಂದಿಗೆ ಬನ್ನಿ- ಅಧಿಕಾರಿಗಳಿಗೆ ಯತೀಶ್ ಉಳ್ಳಾಲ್ ಸೂಚನೆ

Public TV
Last updated: December 19, 2019 1:35 am
Public TV
Share
3 Min Read
MNG Grama Vastavya B
SHARE

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಡಿಸೆಂಬರ್ 22ರಂದು ಮಡಪ್ಪಾಡಿಯಲ್ಲಿ ನಡೆಯಲಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಬರಬೇಕು. ಜನರು ಮುಂದಿರಿಸುವ ಎಲ್ಲಾ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಸೂಚನೆ ನೀಡಿದ್ದಾರೆ.

ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದು ಇಲಾಖೆಗಳದ್ದೇ ಕಾರ್ಯಕ್ರಮ ಎಂಬ ಭಾವನೆ ಇರಲಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮಗೆ ಹೆಮ್ಮೆ. ನಮ್ಮ ಸೇವಾ ಅವಧಿಯಲ್ಲಿ ದಾಖಲಿಸಲ್ಪಡುವ ಅಪೂರ್ವ ಕಾರ್ಯಕ್ರಮ. ಜನರ ಮತ್ತು ಆಡಳಿತ ವ್ಯವಸ್ಥೆಯ ಮಧ್ಯೆ ಕೊಂಡಿಯಾಗಿ ಪತ್ರಕರ್ತರ ಸಂಘ ಈ ಕಾರ್ಯಕ್ರಮ ಆಯೋಜಿಸಿದೆ ಅಸ್ಟೇ. ಆದ್ದರಿಂದ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಅವರು ಹೇಳಿದರು.

MNG Grama Vastavya D

ಇಲಾಖೆಯ ಕಾರ್ಯಕ್ರಮಗಳನ್ನು ಜನರೆಡೆಗೆ ತಲುಪಿಸಲು ಇದೊಂದು ವೇದಿಕೆ. ಹಾಗಾಗಿ ಎಲ್ಲಾ ಇಲಾಖೆಗಳು ತಮ್ಮ ಸ್ಟಾಲ್‍ಗಳನ್ನು ತೆರೆದು ಜನರಿಗೆ ಮಾಹಿತಿ ನೀಡುವಂತೆ ಅವರು ಸೂಚನೆ ನೀಡಿದರು.

ವಿವಿಧ ಇಲಾಖೆಗಳ ಮುಖ್ಯಸ್ಥರಿಂದ ಗ್ರಾಮವಾಸ್ತವ್ಯದ ಸಿದ್ಧತೆಯ ಕುರಿತು ಮಾಹಿತಿ ಪಡೆದ ಅವರು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದ ಯಶಸ್ವಿನ ಜೊತೆಗೆ ನಾಗರಿಕ ಸ್ನೇಹಿ ವರ್ತನೆಯೊಂದಿಗೆ ಇಲಾಖೆಯ ಗೌರವ ಕಾಪಾಡಲು ಪ್ರತಿಯೊಬ್ಬ ಸಿಬ್ಬಂದಿಯೂ ಬದ್ಧರಾಗಿರಬೇಕು. ಗ್ರಾಮಸ್ಥರೊಂದಿಗೆ ಸಕಾರಾತ್ಮಕ ವಾಗಿ ಸ್ಪಂದಿಸಬೇಕು. ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಶ್ರಮಿಸಬೇಕು. ಪ್ರತಿಯೊಂದು ಅಹವಾಲನ್ನೂ ಅಲಿಸಿ ಗ್ರಾಮಸ್ಥರಿಗೆ ಸಮಾಧಾನಕರ ಉತ್ತರವನ್ನು ನೀಡಬೇಕು. ಯಾರಾದರೂ ನಕಾರಾತ್ಮಕವಾಗಿ ಸ್ಪಂದಿಸಿದರೆ ಅಂತವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಜರುಗಿಸಲಾಗಿವುದು ಎಂದರು. ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಮುಂಚಿತವಾಗಿ ಎಲ್ಲಾ ಇಲಾಖಾ ಅಧಿಕಾರಿಗಳು ಮಡಪ್ಪಾಡಿಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಸಹಾಯಕ ಕಮೀಷನರ್ ಸೂಚಿಸಿದರು.

MNG Grama Vastavya C

ಸುಳ್ಯ ತಹಶೀಲ್ದಾರ್ ಎನ್.ಎ.ಕುಂಜಿಅಹ್ಮದ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ್, ಪೊಲೀಸ್ ವೃತ್ತ ನಿರೀಕ್ಷಕ ನವೀನ್‍ಚಂದ್ರ ಜೋಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಕುರಿತು ವಿವಿರಣೆ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಹಾಯಕ ಕಮೀಷನರ್ ಬಿಡುಗಡೆಗೊಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಸುಳ್ಯ ಎಸ್.ಐ ಎಂ.ಆರ್.ಹರೀಶ್, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ತ್ಯಾಗರಾಜ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಣ್ಣೇ ಗೌಡ, ಜಿಲ್ಲಾ ಪಂಚಾಯತ್ ಎಇಇ ಹನುಮಂತರಾಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಲಕ್ಷ್ಮಿ, ಸಿಡಿಪಿಒ ರಶ್ಮಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸುಹಾನಾ, ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಭಾನುಮತಿ, ಮೆಸ್ಕಾಂ ಇಂಜಿನಿಯರ್ ಹರೀಶ್, ದೇವರಾಜ್ ಮುತ್ಲಾಜೆ, ಲಕ್ಷ್ಮೀಶ ರೈ, ಮೋಹನ್ ನಂಗಾರು ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು.

MNG Grama Vastavya

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಲೋಕೇಶ್ ಪೆರ್ಲಂಪಾಡಿ, ಗಂಗಾಧರ ಕಲ್ಲಪಳ್ಳಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ, ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ ಪತ್ರಕರ್ತರ ಸಂಘದ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಗುರುವಾರ ಮಡಪ್ಪಾಡಿಗೆ ಭೇಟಿ:
ಪತ್ರಕರ್ತರ ಸಂಘದ ವತಿಯಿಂದ ನಡೆಯುವ ಗ್ರಾಮ ವಾಸ್ತವ್ಯದ ಹಿನ್ನಲೆಯಲ್ಲಿ ಗುರುವಾರ ಮಡಪ್ಪಾಡಿ ಗ್ರಾಮಕ್ಕೆ ಭೇಟಿ ನೀಡುವುದಾಗಿ ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ. ಸುಳ್ಯ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತಿತರ ಅಧಿಕಾರಿಗಳ ಜೊತೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಅವರು ಹೇಳಿದರು.

TAGGED:Assistant Commissioner of Putturdakshina kannadaGrama vastavyaJournalistsPublic TVದಕ್ಷಿಣ ಕನ್ನಡಪತ್ರಕರ್ತರ ಗ್ರಾಮ ವಾಸ್ತವ್ಯಪತ್ರಕರ್ತರ ಸಂಘಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Wild elephant attacks three ETF staff in Hassan Beluru
Districts

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
36 minutes ago
Donald Trump Angry
Latest

ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್‌ ಕೆಂಡಾಮಂಡಲ

Public TV
By Public TV
37 minutes ago
Arvind Kejriwal 4
Court

ಕೋರ್ಟ್‌ ವಿಚಾರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ – ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್

Public TV
By Public TV
38 minutes ago
PETROL
Latest

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಚಿಂತನೆ ಇಲ್ಲ – ವದಂತಿಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

Public TV
By Public TV
57 minutes ago
bad touch for young women 2 arrested in bengaluru
Bengaluru City

ಬೈಕ್‌ಲ್ಲಿ ಬಂದು ಯುವತಿಯರಿಗೆ ಬ್ಯಾಡ್ ಟಚ್ – ಬೀದಿ ಕಾಮಣ್ಣರು ಅಂದರ್‌

Public TV
By Public TV
1 hour ago
thaad
Latest

ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?