ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಶುಕ್ರವಾರ, ಪೂರ್ವಫಾಲ್ಗುಣಿ ನಕ್ಷತ್ರ
ಬೆಳಗ್ಗೆ 10:07 ನಂತರ ಉತ್ತರ ಫಾಲ್ಗುಣಿ ನಕ್ಷತ್ರ
ರಾಹುಕಾಲ: ಬೆಳಗೆ 10:59 ರಿಂದ 12:25
ಗುಳಿಕಕಾಲ: ಬೆಳಗ್ಗೆ 8:07 ರಿಂದ 9:33
ಯಮಗಂಡಕಾಲ: ಮಧ್ಯಾಹ್ನ 3:16 ರಿಂದ 4:42
Advertisement
ಮೇಷ: ಸ್ಥಿರಾಸ್ತಿಯಿಂದ ಅನುಕೂಲ, ಮಾತೃವಿನಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಆತುರ, ಉದ್ಯೋಗದಲ್ಲಿ ಒತ್ತಡ, ಕುಟುಂಬದಿಂದ ದೂರವಿರಲು ಪ್ರಯತ್ನಸುವಿರಿ.
Advertisement
ವೃಷಭ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ವಾಹನ ಖರೀದಿಯಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ವಿರಸ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
Advertisement
ಮಿಥುನ: ಪ್ರಯಾಣಕ್ಕಾಗಿ ಧನವ್ಯಯ, ಸಾಲ ಬಾಧೆ, ಶತ್ರುಗಳ ಕಾಟ, ಸ್ವಯಂಕೃತ್ಯಗಳಿಂದ ನಿದ್ರಾಭಂಗ, ಬಂಧುಗಳಿಂದ ಮೋಸ.
Advertisement
ಕಟಕ: ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಧನಾಗಮನ, ಹಿರಿಯ ಸಹೋದರಿಯಿಂದ ಸಮಸ್ಯೆ, ಮಹಿಳಾ ಮಿತ್ರರಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ.
ಸಿಂಹ: ಉದ್ಯೋಗ ಹುಡುಕಾಟ, ವ್ಯಾಪಾರ ಅಭಿವೃದ್ಧಿಗಾಗಿ ಖರ್ಚು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ, ಉದ್ಯೋಗದಲ್ಲಿ ತೊಡಕು, ಮನಸ್ಸಿನಲ್ಲಿ ಗಾಬರಿ-ಆತಂಕ, ದೇವತಾ ಪೂಜೆಯಲ್ಲಿ ಗೊಂದಲ.
ಕನ್ಯಾ: ತಂದೆಯಿಂದ ಲಾಭ, ದೂರ ಪ್ರಯಾಣದಿಂದ ಅನುಕೂಲ, ನೀವಾಡುವ ಮಾತಿನಿಂದ ಕಲಹ, ದಾಯಾದಿಗಳಿಂದ ಒತ್ತಡ, ಮಾನಸಿಕ ವ್ಯಥೆ.
ತುಲಾ: ಕೋರ್ಟ್ ಕೇಸ್ಗಳಲ್ಲಿ ಪ್ರಗತಿ, ವ್ಯಾಪಾರ-ಉದ್ಯೋಗದಲ್ಲಿ ಅನುಕೂಲ, ವಿಪರೀತ ರಾಜಯೋಗ, ಆಕಸ್ಮಿಕ ಅದೃಷ್ಟ ಪ್ರಾಪ್ತಿ, ಮಿತ್ರರಿಂದ ಸಹಕಾರ, ಚೀಟಿ ವ್ಯವಹಾರಗಳಲ್ಲಿ ಮೋಸ.
ವೃಶ್ಚಿಕ: ಸಂಗಾತಿಯಿಂದ ನೋವು, ಉದ್ಯೋಗದಲ್ಲಿ ಒತ್ತಡ, ಜೀವನದಲ್ಲಿ ಜಿಗುಪ್ಸೆ, ಉದ್ಯೋಗ ಬದಲಾಯಿಸುವ ಮನಸ್ಸು.
ಧನಸ್ಸು: ತಂದೆ ಮಾಡಿದ ಸಾಲ ಬಾಧೆ, ಪ್ರಯಾಣದಲ್ಲಿ ಅಡೆತಡೆ ಬರುವುದು, ಸ್ನೇಹಿತರು ಶತ್ರುಗಳಾಗಿ ಪರಿವರ್ತನೆಯಾಗುವರು, ಈ ದಿನ ಅಶುಭ ಫಲ.
ಮಕರ: ಪ್ರೇಮ ಸಂಬಂಧಗಳಲ್ಲಿ ಬಿರುಕು, ಉದ್ಯೋಗದಲ್ಲಿ ಅಸ್ಥಿರತೆ, ಅವಕಾಶಗಳು ಕೈ ತಪ್ಪುವುದು, ಅಧಿಕವಾದ ಆಲೋಚನೆ.
ಕುಂಭ: ಸಂಗಾತಿಯೊಂದಿಗೆ ವೈಮನಸ್ಸು, ಸ್ಥಿರಾಸ್ತಿ-ವಾಹನ ಖರೀದಿಗೆ ಸಾಲ ಮಾಡುವ ಸಾಧ್ಯತೆ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಿರಿ, ಸ್ನೇಹಿತರಿಂದ ಸಾಲದ ಸಹಾಯ ಕೇಳುವಿರಿ.
ಮೀನ: ಮಕ್ಕಳಲ್ಲಿ ಶತ್ರುತ್ವ ಹೆಚ್ಚಾಗುವುದು, ಭವಿಷ್ಯದ ಬಗ್ಗೆ ಚಿಂತನೆ ಮಾಡುವಿರಿ, ಮಕ್ಕಳ ಬಗ್ಗೆ ಆಲೋಚನೆ, ಮನೆಯಲ್ಲಿ ಗೊಂದಲಮಯ ವಾತಾವರಣ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv